ಆರೋಪ ಸಾಬೀತುಪಡಿಸಿದ್ರೆ 24 ಗಂಟೇಲಿ ರಾಜಕೀಯ ನಿವೃತ್ತಿ; BSY ಸವಾಲು

Team Udayavani, Feb 8, 2019, 6:01 AM IST

ಬೆಂಗಳೂರು: ಬಜೆಟ್ ಅಧಿವೇಶನಕ್ಕೂ ಮುನ್ನ ರಾಜ್ಯ ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ತೀವ್ರ ಬಿರುಸುಗೊಂಡಿದೆ. ದೇವದುರ್ಗದಲ್ಲಿ ಬಿಎಸ್ ಯಡಿಯೂರಪ್ಪ ಅವರು ಜೆಡಿಎಸ್ ಶಾಸಕನ ಪುತ್ರನಿಗೆ ಆಮಿಷವೊಡ್ಡಿರುವ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿ ಆರೋಪ ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಸಿನಿಮಾದ ವ್ಯಕ್ತಿ..ಅವರು ಬಿಡುಗಡೆ ಮಾಡಿರುವ ಆಡಿಯೋ ನಕಲಿ. ಸಿಎಂ ಈ ಆರೋಪವನ್ನು ಸಾಬೀತುಪಡಿಸಲಿ 24 ಗಂಟೆಯಲ್ಲೇ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಗುಡುಗಿದ್ದಾರೆ. ಸ್ಪೀಕರ್ , ಜಡ್ಜ್ ಗಳನ್ನು ಬುಕ್ ಮಾಡಿದ್ದೇವೆ ಎಂಬ ಆರೋಪ ಶುದ್ಧ ಸುಳ್ಳು ಎಂದು ತಿರುಗೇಟು ನೀಡಿದರು.

ಗುರು ಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರ್ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿಲ್ಲ. ಕುಮಾರಸ್ವಾಮಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆಡಿಯೋ ಕೂಡಾ ನಕಲಿ ಎಂದು ದೂರಿದರು.

ರಾಜೀನಾಮೆ ಕೊಟ್ಟು ಮನೆಗೆ ಹೋಗಿ:

ಇಂದೂ ಕೂಡಾ 10-11 ಕಾಂಗ್ರೆಸ್ ಶಾಸಕರು ಸದನಕ್ಕೆ ಹಾಜರಾಗುವುದಿಲ್ಲ. ಒಟ್ಟು 15 ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಹಾಜರಾಗುವುದಿಲ್ಲ. ಹೀಗಾಗಿ ಬಹುಮತ ಇಲ್ಲದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಲಿ ಎಂದು ಬಿಎಸ್ ವೈ ಸವಾಲು ಹಾಕಿದ್ದಾರೆ.

ನಾವು ಬಜೆಟ್ ಮಂಡನೆಗೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸಲ್ಲ. ಇನ್ನೂ ಎರಡು, ಮೂರು ದಿನ ಚರ್ಚೆ ನಡೆಸಲು ನಾವು ಕೂಡಾ ಸಿದ್ದರಿದ್ದೇವೆ ಎಂದು ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ