ಫೆ. 11ರಂದು ಪ್ರಿಯಾಂಕಾ,ಸಿಂಧಿಯಾ ಅಖಾಡ ಪ್ರವೇಶ

Team Udayavani, Feb 8, 2019, 12:30 AM IST

ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪೂರ್ವ ವಲಯದ ಚುನಾವಣಾ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಸೋಮವಾರ ಲಕ್ನೋಗೆ ಆಗಮಿಸುವ ಮೂಲಕ ಅಖಾಡಕ್ಕೆ ಕಾಲಿಡಲಿದ್ದಾರೆ. 

ಇವರೊಂದಿಗೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಉತ್ತರ ಪ್ರದೇಶದ ಪಶ್ಚಿಮ ವಲಯದ ಉಸ್ತುವಾರಿ ಹೊತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ ಲಕ್ನೋಗೆ ಆಗಮಿಸಲಿದ್ದು, ಈ ಮೂವರೂ ನಾಯಕರು ವಿಮಾನ ನಿಲ್ದಾಣದಿಂದ ರೋಡ್‌ ಶೋ ಮೂಲಕ ಲಕ್ನೋದಲ್ಲಿನ ಕಾಂಗ್ರೆಸ್‌ ಕಚೇರಿಗೆ ಬರಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ವಕ್ತಾರ ಅಂಶು ಅವಸ್ತಿ ತಿಳಿಸಿದ್ದಾರೆ. ರಾಹುಲ್‌ ಅವರು ಅಂದೇ ಹೊಸದಿಲ್ಲಿಗೆ ಹಿಂದಿರುಗಲಿದ್ದು, ಪ್ರಿಯಾಂಕಾ ನಾಲ್ಕು ದಿನಗಳ ಕಾಲ ತಮ್ಮ ವಲಯದಲ್ಲಿ ಸುತ್ತಾಡಿ, ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ಗುರುವಾರ ರಾಹುಲ್‌ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗಳು ಮತ್ತು ವಿವಿಧ ರಾಜ್ಯಗಳ ಉಸ್ತುವಾರಿ ಗಳೊಂದಿಗೆ ನಡೆಸಿದ ಸಭೆಯಲ್ಲಿ ಪ್ರಿಯಾಂಕಾ ಅವರೂ ಉಪ ಸ್ಥಿತರಿದ್ದರು. ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 

ಮೋದಿಗೆ ರಾಹುಲ್‌ ಮತ್ತೆ ಪಂಥಾಹ್ವಾನ
“ರಫೇಲ್‌ ಒಪ್ಪಂದ ಕುರಿತಂತೆ ಐದೇ ಐದು ನಿಮಿಷದ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತೂಮ್ಮೆ ಬಹಿರಂಗ ಸವಾಲು ಹಾಕಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, “”ಮೋದಿಯವರೇ ನಿಮಗೆ 56 ಇಂಚು ಎದೆ ಎಂದು ನೀವೇ ಹೇಳಿಕೊಂಡಿದ್ದೀರಿ. ಹಾಗಿದ್ದರೆ, ಬನ್ನಿ. ಸಾರ್ವಜನಿಕರ ಮುಂದೆ ರಫೇಲ್‌ ಕುರಿತಂತೆ ಚರ್ಚಿಸೋಣ” ಎಂದಿದ್ದಾರೆ. ಜತೆಗೆ, “”ಮೋದಿ  ಈ ಚರ್ಚೆಗೆ ಆಗಮಿಸಲಾರರು. ಅವರೊಬ್ಬ ಪುಕ್ಕಲ ಆಸಾಮಿ” ಎಂದಿದ್ದಾರೆ.  “”ಬಿಜೆಪಿಯ ಮೂಲಕ ಆರ್‌ಎಸ್‌ಎಸ್‌, ಸರ್ಕಾರಿ ಸಂಸ್ಥೆಗಳನ್ನು ಆಕ್ರಮಣ ಮಾಡುತ್ತಿದೆ. ಇದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲೂ ಆಕ್ರಮಣ ಮಾಡಿಕೊಳ್ಳಲು ಯತ್ನಿಸಿತ್ತು. ಆದರೀಗ, ಆ ರಾಜ್ಯಗಳಲ್ಲಿರುವ ಕಾಂಗ್ರೆಸ್‌ ಸರಕಾರ, ಅಂಥವರನ್ನು ಆಡಳಿತ ವ್ಯವಸ್ಥೆಯಿಂದ ಹೊರಗಿಡಲಿದೆ” ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ವಾಷಿಂಗ್ಟನ್‌: ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಿಸುವ ವಿಮಾನಗಳಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣೆ ವ್ಯವಸ್ಥೆ ಒದಗಿಸಲು ಅಮೆರಿಕ ಸಮ್ಮತಿ ನೀಡಿದೆ. 1300 ಕೋಟಿ...

  • ವಾಷಿಂಗ್ಟನ್‌: ಮುಂದಿನ ವಾರದೊಳಗೆ ಇರಾಕ್‌ ಮತ್ತು ಸಿರಿಯಾ ದೇಶಗಳು ಐಸಿಸ್‌ನಿಂದ ಶೇ.100ರಷ್ಟು ಮುಕ್ತವಾಗಲಿದೆ. ಇದನ್ನು ಅಧಿಕೃತವಾಗಿ ಘೋಷಿಸಲು ಕಾತರನಾಗಿದ್ದೇನೆ...

  • ಇಸ್ಲಮಾಬಾದ್‌/ಕರಾಚಿ: ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಮಾತ್ರವಲ್ಲದೆ ಪವಿತ್ರ ಗ್ರಂಥಗಳನ್ನು ಹಾಗೂ ವಿಗ್ರಹಗಳನ್ನು...

  • ಟೊರಂಟೊ/ನ್ಯೂಯಾರ್ಕ್‌: ಭಾರತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ಕೆನಡಾದ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆ ಕ್ವಾಂಡ್ರಿಕಾ ಸಿ.ಎಕ್ಸ್‌ ಕಂಪನಿಯ...

  • ವಾಷಿಂಗ್ಟನ್‌: ಮೆಕ್ಸಿಕೋ ಗಡಿ ಗುಂಟ 40 ಸಾವಿರ ಕೋಟಿ ರೂ. (5.7 ಬಿಲಿಯನ್‌ ಡಾಲರ್‌) ವೆಚ್ಚದಲ್ಲಿ ಗೋಡೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌...

ಹೊಸ ಸೇರ್ಪಡೆ