ಸಿಂಧ್‌ನಲ್ಲಿ ದೇಗುಲ ಧ್ವಂಸ

Team Udayavani, Feb 7, 2019, 12:30 AM IST

ಇಸ್ಲಮಾಬಾದ್‌/ಕರಾಚಿ: ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಮಾತ್ರವಲ್ಲದೆ ಪವಿತ್ರ ಗ್ರಂಥಗಳನ್ನು ಹಾಗೂ ವಿಗ್ರಹಗಳನ್ನು ಕಿಡಿಗೇಡಿಗಳು ಬೆಂಕಿಗೆ ಹಾಕಿ ಸುಟ್ಟಿದ್ದಾರೆ. ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಘಟನೆಯನ್ನು ಖಂಡಿಸಿದ್ದು, ತನಿಖೆಗೆ ಆದೇಶ ನೀಡಿದ್ದಾರೆ. ಸಿಂಧ್‌ ಪ್ರಾಂತ್ಯದ ಖೈರ್‌ಪುರ್‌ ಜಿಲ್ಲೆಯ ಕುಂಬ್‌ ಎಂಬಲ್ಲಿ ಅಪರಿಚಿತ ಕಿಡಿಗೇಡಿಗಳು ಈ ದುಷ್ಕೃತ್ಯವೆಸಗಿದ್ದಾರೆ. ಇದೊಂದು ಖಂಡನಾರ್ಹ ಎಂದು ಟ್ವೀಟ್‌ ಮಾಡಿರುವ ಪ್ರಧಾನಿ ಇಮ್ರಾನ್‌ ಖಾನ್‌ ಸಿಂಧ್‌ ಪ್ರಾಂತ್ಯದ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಕ್ರಮಕ್ಕೆ ಒಳಪಡಿಸಬೇಕು. ಈ ಘಟನೆ ಕುರಾನ್‌ನ ಬೋಧನೆಗಳಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ. ಘಟನೆ ಬಳಿಕ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ವಾಷಿಂಗ್ಟನ್‌: ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಿಸುವ ವಿಮಾನಗಳಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣೆ ವ್ಯವಸ್ಥೆ ಒದಗಿಸಲು ಅಮೆರಿಕ ಸಮ್ಮತಿ ನೀಡಿದೆ. 1300 ಕೋಟಿ...

  • ವಾಷಿಂಗ್ಟನ್‌: ಮುಂದಿನ ವಾರದೊಳಗೆ ಇರಾಕ್‌ ಮತ್ತು ಸಿರಿಯಾ ದೇಶಗಳು ಐಸಿಸ್‌ನಿಂದ ಶೇ.100ರಷ್ಟು ಮುಕ್ತವಾಗಲಿದೆ. ಇದನ್ನು ಅಧಿಕೃತವಾಗಿ ಘೋಷಿಸಲು ಕಾತರನಾಗಿದ್ದೇನೆ...

  • ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪೂರ್ವ ವಲಯದ ಚುನಾವಣಾ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ...

  • ಟೊರಂಟೊ/ನ್ಯೂಯಾರ್ಕ್‌: ಭಾರತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ಕೆನಡಾದ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆ ಕ್ವಾಂಡ್ರಿಕಾ ಸಿ.ಎಕ್ಸ್‌ ಕಂಪನಿಯ...

  • ವಾಷಿಂಗ್ಟನ್‌: ಮೆಕ್ಸಿಕೋ ಗಡಿ ಗುಂಟ 40 ಸಾವಿರ ಕೋಟಿ ರೂ. (5.7 ಬಿಲಿಯನ್‌ ಡಾಲರ್‌) ವೆಚ್ಚದಲ್ಲಿ ಗೋಡೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌...

ಹೊಸ ಸೇರ್ಪಡೆ