ಬಣ್ಣದ ಬದುಕಿನಲ್ಲಿ ಹೊಸತನದ ಹುಡುಕಾಟ

Team Udayavani, Mar 14, 2019, 7:55 AM IST

ಕರಾವಳಿಯ ಪ್ರತಿಯೊಂದು ಮನೆಯಲ್ಲೂ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರೇಮಿಗಳು ಸಿಗುತ್ತಾರೆ. ಯಕ್ಷಗಾನ ಕಲಾವಿದನೊಬ್ಬನ ಜೀವನವನ್ನು ಆಧರಿಸಿ ರಚಿತವಾಗಿರುವ ಕಾದಂಬರಿ ‘ಬಯಲಾಟ’. ವೇಣುಗೋಪಾಲ ಕಾಸರಗೋಡು ಇದರ ಕರ್ತೃ ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆಗಳು ಯಾವ ರೀತಿ ಉಂಟಾಗುತ್ತವೆ, ಅದು ಕಲಾವಿದರನ್ನು ಹೇಗೆ ಬಾಧಿಸುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಕಾದಂಬರಿಯಲ್ಲಿ ಆಳವಾದ ಶೋಧನೆ ನಡೆದಿದೆ.

ಘಟನೆ 1
ಕಿಟ್ಟು ಮತ್ತು ಸೋಮನ ಜೀವನದ ಮೊದಲ ತಿರುವು ಅದು. ಚಿಕ್ಕಮ್ಮನನ್ನು ಮೊದಲ ಬಾರಿಗೆ ಎದುರು ಹಾಕಿಕೊಂಡು ಯಕ್ಷಗಾನ ನೋಡಲು ಹೊರಟ ಕಿಟ್ಟ ಮತ್ತು ಸೋಮನಿಗೆ ಅವರ ಜತೆಯೇ ಹೋಗುವ ಮನಸ್ಸಾಗುತ್ತದೆ. ಗೋಪಣ್ಣ ಭಟ್ಟರು ಮತ್ತು ಮೇಳದ ಯಜಮಾನರ ಮನವೊಲಿಸಿ ಟೆಂಟ್‌ ಗಾಡಿ ಹತ್ತಿಯೇ ಬಿಡುತ್ತಾರೆ. ಹಿರಿತನದ ದರ್ಪಕ್ಕೆ ಮೊದಲು ಸ್ವಲ್ಪ ಅಂಜಿದರೂ ಗೋಪಣ್ಣ ಭಟ್ಟರ ರಕ್ಷಣೆ ಇದ್ದುದರಿಂದ ಅಲ್ಲಿ ಜೀವನ ಸುಲಭವಾಗುತ್ತದೆ.

ಘಟನೆ 2
ಕಲೆ ಎಂಬುದು ನಿಂತ ನೀರಲ್ಲ. ಅದರ ಚಲನೆ ನಿರಂತರವಾಗಿರುತ್ತದೆ. ಇದನ್ನು ತಿಳಿದಿದ್ದ ಗೋಪಣ್ಣ ಭಟ್ಟರು ಕಿಟ್ಟುವಿಗೆ ಯಕ್ಷಗಾನದ ಕಲೆ ಒಬ್ಬರು ಮೇಳದಲ್ಲಿಲ್ಲ ಎಂಬ ಕಾರಣಕ್ಕೆ ಯಕ್ಷಗಾನ ನಿಂತುಹೋಗುವುದಿಲ್ಲ ಎಂದು ಹೇಳುತ್ತಾರೆ. ಯಾರಿಗೆ ಗೊತ್ತು ನಾಳೆ ನೀನು ಕೂಡ ವೇಷ ಹಾಕಿ ದೊಡ್ಡ ಕಲಾವಿದ ಆಗಬಹುದು. ಭವಿಷ್ಯವನ್ನು ಕಂಡೋರು ಯಾರು. ನಿನಗೆ ಕಲೆಯ ಮೇಲೆ ಅಷ್ಟು ಆಸಕ್ತಿ ಇದ್ದರೆ ನಮ್ಮ ಮನೆಗೆ ಬಾ ನೋಡುವ ಎಂದು ಹೇಳುತ್ತಾರೆ. ಕಿಟ್ಟುವಿಗೆ ಹಿಡಿಸಲಾರದಷ್ಟು ಆನಂದವಾಗುತ್ತದೆ. ಅವನ ಜೀವನದ ಎರಡನೇ ಅಧ್ಯಾಯ ಅಲ್ಲಿಂದ ಆರಂಭವಾಗುತ್ತದೆ.

ಘಟನೆ 3
ಮೊದಲ ಸಲ ಕಿಟ್ಟು ಅಭಿಮನ್ಯುವಿನ ವೇಷ ಹಾಕಿ ರಂಗದಲ್ಲಿ ಕುಣಿಯುತ್ತಾನೆ. ಆ ಕ್ಷಣ ಕಿಟ್ಟುವಿನ ಬಣ್ಣದ ಬದುಕಿಗೆ‌ ಮುನ್ನುಡಿಯಾಗುತ್ತದೆ. ಮಹತ್ವಾಕಾಂಕ್ಷೆಯ ಆರಂಭವಾಗ ತೊಡಗುತ್ತದೆ. ಮರೆಯಲ್ಲಿ ನಿಂತು ಕಿಟ್ಟುವಿನ ಅಭಿನಯ ನೋಡಿದ ಭಟ್ಟರು ಮೇಳದ ಯಜಮಾನರಲ್ಲಿ ಕಲೆ ಕಲಿಯೋದು ಬೇರೆ, ಒಲಿಯೋದು ಬೇರೆ, ಇವ ನನ್ನನ್ನು ಮೀರಿಸ್ತಾನೆ. ನೋಡ್ತಾ ಇರಿ ಎನ್ನುತ್ತಾರೆ.

ಸುಶ್ಮಿತಾ ಶೆಟ್ಟಿ

https://beta.udayavani.com/sudina/eduguide/book-talk

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ