ಗ್ಯಾರೇಜ್‌ನ ದನಿ  ದೇವದಾಸ್‌ ಕಾಪಿಕಾಡ್‌!

Team Udayavani, Feb 7, 2019, 7:02 AM IST

ದೇವದಾಸ್‌ ಕಾಪಿಕಾಡ್‌ ಸದ್ಯ ‘ಜಬರ್ದಸ್ತ್ ಶಂಕರ’ನ ಬ್ಯುಸಿಯಲ್ಲಿದ್ದಾರೆ. ಮಾಸ್‌ ಫಿಲ್ಮ್ ಆಗಿರುವುದರಿಂದ ಸಾಹಸ ದೃಶ್ಯಗಳಿಗೆ ಈ ಸಿನೆಮಾ ಸಾಕಷ್ಟು ಅವಕಾಶ ನೀಡಿದೆ. ಎರಡು-ಮೂರು ಕೆಮರಾ ಬಳಸಿ ಮೂರು-ನಾಲ್ಕು ದಿನ ಸಾಹಸ ದೃಶ್ಯಗಳನ್ನೇ ಚಿತ್ರೀಕರಿಸಲಾಗಿದೆ. ಮಾಸ್‌ ಮಾದ ಅವರ ನೇತೃತ್ವದಲ್ಲಿ ಅರ್ಜುನ್‌ ಕಾಪಿಕಾಡ್‌ ಇದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಅಂದಹಾಗೆ ದೇವದಾಸ್‌ ಕಾಪಿಕಾಡ್‌ ಕೂಡ ಈ ಸಿನೆಮಾದಲ್ಲಿ ಕಾಮಿಡಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿ ರುವುದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

 ‘ಏರಾ ಉಲ್ಲೆರ್‌ಗೆ’ ಸಿನೆಮಾದಲ್ಲಿನ ಕಾಪಿಕಾಡ್‌ ಶೈಲಿ ಕಂಡು ಬಹುತೇಕ ಜನ ಅಂತಹುದೇ ನಟನೆಗೆ ಕಾಪಿಕಾಡ್‌ ಅವರನ್ನು ಒತ್ತಾಯಿಸುತ್ತಿದ್ದಾರೆ. ಸದ್ಯ ಜಬರ್ದಸ್ತ್ ಶಂಕರ ಸಿನೆಮಾದಲ್ಲಿ ದೇವದಾಸ್‌ ಕಾಪಿಕಾಡ್‌ ಗ್ಯಾರೇಜ್‌ ಮಾಲಕರು. ಅವರ ಉಸ್ತುವಾರಿಯಲ್ಲಿ ಒಂದಿಷ್ಟು ಜನ ಕೆಲಸ ಮಾಡುತ್ತಿದ್ದು, ಇದು ಕಥೆಗೂ ಸಂಬಂಧವನ್ನು ಬೆಸೆದುಕೊಂಡಿದೆ. ಅಂದಹಾಗೆ, ಈ ಸಿನೆಮಾದ ಅರ್ಧದಷ್ಟು ಚಿತ್ರೀಕರಣ ಮಾತ್ರ ಈಗ ಮುಗಿದಿದ್ದು, ಆದರೆ ಮೊದಲ ಟೀಸರ್‌ ಅದಾಗಲೇ ರಿಲೀಸ್‌ ಆಗಿ, ಸಾವಿರಾರು ಲೈಕ್‌ ಪಡೆದುಕೊಂಡಿದೆ ಎಂಬುದು ವಿಶೇಷ. ಅರ್ಜನ್‌ ಅವರ ಎಂಟ್ರಿಯ ದೃಶ್ಯ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. 

ಮಣಿಕಾಂತ್‌ ಕದ್ರಿ ಸಂಗೀತವಿರುವ ಈ ಸಿನೆಮಾದ ಹಾಡಿನ ಚಿತ್ರೀಕರಣದಲ್ಲಿ ಬರೋಬ್ಬರಿ 300 ನೃತ್ಯಗಾರರು ಪಾಲ್ಗೊಂಡಿ ದ್ದರು. ಚೆಂಡೆ, ಯಕ್ಷಗಾನ ಸೇರಿದಂತೆ ಕರಾವಳಿಯ ಬಹುಬಗೆಯ ದರ್ಶನ ಈ ಹಾಡಿನ ಮೂಲಕ ನಡೆದಿದೆ. ಸಾಯಿಕೃಷ್ಣ, ಸತೀಶ್‌ ಬಂದಳೆ, ಸುನಿಲ್‌ ನೆಲ್ಲಿಗುಡ್ಡೆ, ಲಕ್ಷ್ಮಣ ಕುಮಾರ್‌ ಮಲ್ಲೂರು, ಗೋಪಿನಾಥ್‌ ಭಟ್, ಚೇತನ್‌ ರೈ ಮಾಣಿ, ಸರೋಜಿನಿ ಶೆಟ್ಟಿ ಸೇರಿದಂತೆ ಪ್ರಮುಖರು ಮುಖ್ಯ ರೋಲ್‌ನಲ್ಲಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

  • ದೇಶದ ಜಲಪಾತಗಳ ಪೈಕಿ ಅತ್ಯಂತ ವಿಶಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಹಾಗೂ ವಿಭಿನ್ನವಾದ ಆಯಾಮವನ್ನು ಹೊಂದಿರುವ ಕಾರಣದಿಂದ ಹೊಗೇನಕಲ್‌ ಫಾಲ್ಸ್ ವೈಶಿಷ್ಟ್ಯಪೂರ್ಣ...

  • ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದ ತುಳು ಚಿತ್ರಗಳು ಬರುತ್ತಿರುವ ಜತೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳು ದೇಶದ ಮೂಲೆ ಮೂಲೆಯಲ್ಲಿರುವವರಿಗೆ ಇಷ್ಟವಾಗಿ ಕಡಿಮೆ...

  • ವಿಸ್ಮಯ ವಿನಾಯಕ್‌ ನಿರ್ದೇಶನದಲ್ಲಿ ಸಂದೇಶ್‌ರಾಜ್‌ ಬಂಗೇರ ಮತ್ತು ರೋಹನ್‌ ಕೋಡಿಕಲ್‌ ಅವರು ನಿರ್ಮಾಣ ಮಾಡುತ್ತಿರುವ 'ರಡ್ಡ್ ಎಕ್ರೆ ನಾಟ್ ಫಾರ್‌ ಸೇಲ್‌' ಸಿನೆಮಾವು...

  • ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಸಿನೆಮಾ 'ಅಪ್ಪೆ ಟೀಚರ್‌'. ವಿಭಿನ್ನ ಮ್ಯಾನರಿಸಂನಲ್ಲಿ ಮೂಡಿಬಂದ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ...

  • ಸಾಮಾನ್ಯವಾಗಿ ಎಲ್ಲ ಉದ್ಯೋಗಸ್ಥರೂ ರವಿವಾರ ಎಂಬ ರಿಲೀಫ್ ಗಾಗಿ ಕಾಯುತ್ತಿರುತ್ತಾರೆ. ಅದು ವಿರಾಮಕ್ಕಿರಬಹುದು, ಮೋಜಿಗಿರಬಹುದು, ಅತಿ ನಿದ್ದೆಗಿರಬಹುದು ಅಥವಾ...

ಹೊಸ ಸೇರ್ಪಡೆ