ಮೇ ಯಲ್ಲಿ ‘ರಡ್ಡ್ ಎಕ್ರೆ’ ಸೇಲ್‌

Team Udayavani, Feb 7, 2019, 7:21 AM IST

ವಿಸ್ಮಯ ವಿನಾಯಕ್‌ ನಿರ್ದೇಶನದಲ್ಲಿ ಸಂದೇಶ್‌ರಾಜ್‌ ಬಂಗೇರ ಮತ್ತು ರೋಹನ್‌ ಕೋಡಿಕಲ್‌ ಅವರು ನಿರ್ಮಾಣ ಮಾಡುತ್ತಿರುವ ‘ರಡ್ಡ್ ಎಕ್ರೆ ನಾಟ್ ಫಾರ್‌ ಸೇಲ್‌’ ಸಿನೆಮಾವು ಎಲ್ಲ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರೈಸಿದ್ದು, ಸಿನೆಮಾವನ್ನು ಸೆನ್ಸಾರ್‌ಗೆ ಕಳುಹಿಸಿಕೊಡುವ ಸಿದ್ಧತೆಯಲ್ಲಿದೆ. ಒನ್‌ಲೈನ್‌ ಸಿನೆಮಾ ಬ್ಯಾನರ್‌ನಡಿಯಲ್ಲಿ ತಯಾರಾದ ಈ ಸಿನೆಮಾವನ್ನು ಒಂದೇ ಹಂತದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

ಹೆಸರೇ ಸೂಚಿಸುವಂತೆ ಇದೊಂದು ರಿಯಲ್‌ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿ ಸಿದ ಕಥೆಯುಳ್ಳ ಹೊಸತನದಿಂದ ಕೂಡಿದ್ದು, ತುಳುವಿಗೆ ಅಗತ್ಯವಿರುವ ಹಾಸ್ಯವೂ ಇದ ರಲ್ಲಿದೆ. ವಿಶೇಷ ಎಂದರೆ ಖ್ಯಾತ ನಿರ್ದೇಶಕ ಸೂರಜ್‌ ಶೆಟ್ಟಿ ಅವರು ಈ ಚಿತ್ರದಲ್ಲಿ ಒಂದು ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಯಲ್ಲಿ ನಟ ದೀಪಕ್‌ ಶೆಟ್ಟಿಯೂ ಗೆಸ್ಟ್‌ ರೋಲ್‌ ಮಾಡಿದ್ದಾರೆ. ಉಳಿದಂತೆ ಖ್ಯಾತ ಕಲಾವಿದರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಪ್ರಕಾಶ್‌ ತೂಮಿ ನಾಡು, ಮಂಜು ರೈ ಮುಂತಾದವರ ಪ್ರಬುದ್ಧ ತಾರಾಗಣವಿದೆ. ಸಿನೆಮಾದಲ್ಲಿ ಪೃಥ್ವಿ ಅಂಬರ್‌ ನಾಯಕ ನಟ ನಾಗಿ ನಿರೀಕ್ಷಾ ಶೆಟ್ಟಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಸಿನೆಮಾವನ್ನು ಮೇ ತಿಂಗಳಲ್ಲಿ ತೆರೆ ಕಾಣಿಸುವ ಉದ್ದೇಶ ಚಿತ್ರತಂಡಕ್ಕೆ ಇದೆ. ರಡ್ಡ್ ಎಕ್ರೆ ಸಿನೆಮಾ ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಎಂದು ಚಿತ್ರತಂಡ ಹೇಳುತ್ತಿದೆ. ಸದ್ಯವೇ ಇದರ ಮೂಲಕ ತುಳು ಚಿತ್ರರಂಗಕ್ಕೆ ಒಂದು ಭಿನ್ನ ಸಿನೆಮಾ ಸೇರ್ಪಡೆಯಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

  • ದೇಶದ ಜಲಪಾತಗಳ ಪೈಕಿ ಅತ್ಯಂತ ವಿಶಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಹಾಗೂ ವಿಭಿನ್ನವಾದ ಆಯಾಮವನ್ನು ಹೊಂದಿರುವ ಕಾರಣದಿಂದ ಹೊಗೇನಕಲ್‌ ಫಾಲ್ಸ್ ವೈಶಿಷ್ಟ್ಯಪೂರ್ಣ...

  • ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದ ತುಳು ಚಿತ್ರಗಳು ಬರುತ್ತಿರುವ ಜತೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳು ದೇಶದ ಮೂಲೆ ಮೂಲೆಯಲ್ಲಿರುವವರಿಗೆ ಇಷ್ಟವಾಗಿ ಕಡಿಮೆ...

  • ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಸಿನೆಮಾ 'ಅಪ್ಪೆ ಟೀಚರ್‌'. ವಿಭಿನ್ನ ಮ್ಯಾನರಿಸಂನಲ್ಲಿ ಮೂಡಿಬಂದ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ...

  • ದೇವದಾಸ್‌ ಕಾಪಿಕಾಡ್‌ ಸದ್ಯ 'ಜಬರ್ದಸ್ತ್ ಶಂಕರ'ನ ಬ್ಯುಸಿಯಲ್ಲಿದ್ದಾರೆ. ಮಾಸ್‌ ಫಿಲ್ಮ್ ಆಗಿರುವುದರಿಂದ ಸಾಹಸ ದೃಶ್ಯಗಳಿಗೆ ಈ ಸಿನೆಮಾ ಸಾಕಷ್ಟು ಅವಕಾಶ ನೀಡಿದೆ....

  • ಸಾಮಾನ್ಯವಾಗಿ ಎಲ್ಲ ಉದ್ಯೋಗಸ್ಥರೂ ರವಿವಾರ ಎಂಬ ರಿಲೀಫ್ ಗಾಗಿ ಕಾಯುತ್ತಿರುತ್ತಾರೆ. ಅದು ವಿರಾಮಕ್ಕಿರಬಹುದು, ಮೋಜಿಗಿರಬಹುದು, ಅತಿ ನಿದ್ದೆಗಿರಬಹುದು ಅಥವಾ...

ಹೊಸ ಸೇರ್ಪಡೆ