ಐಬಾಲ್‌ ಸ್ಲೈಡ್  ಎಲನ್‌ 3×32ಟ್ಯಾಬ್ಲೆಟ್

Team Udayavani, Feb 8, 2019, 7:41 AM IST

ಐಬಾಲ್‌ ಸ್ಲೈಡ್ ಎಲನ್‌ 3×32 ಟ್ಯಾಬ್ಲೆಟ್ನ್ನು ಕಳೆದ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು 10.10 ಇಂಚ್‌ನ ಡಿಸ್‌ಪ್ಲೇ ಹೊಂದಿದ್ದು 800×1280 ಪಿಕ್ಸೆಲ್‌ ರೆಸೆಲ್ಯೂಷನ್‌ನ್ನು ಹೊಂದಿದೆ.

ಐಬಾಲ್‌ ಎಲೆಕ್ಟ್ರಾನಿಕ್‌ ಕಂಪೆನಿಯು ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ಗ‌ಳನ್ನು ಹೆಚ್ಚಾಗಿ ಉತ್ಪಾದಿಸುತ್ತದೆ. ಮೊದಲು ಕಂಪ್ಯೂಟರ್‌ನ ಪೆರಿಫೆರಲ್ಸ್‌ ತಯಾರಕರಾಗಿ ಗುರುತಿಸಿಕೊಂಡ ಈ ಕಂಪೆನಿ ಅನಂತರ ಆ್ಯಂಡ್ರಾಯ್ಡ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹೊಸ ಯೋಜನೆ ಆರಂಭಿಸಿತು. ಬಳಿಕ ಸ್ಪೀಕರ್‌, ಹೆಡ್‌ಫೋನ್‌, ಪೆನ್‌ಡ್ರೈವ್‌, ಕೀಬೋರ್ಡ್‌, ಮೌಸ್‌ ಪಾಯಿಂಟಿಗ್‌ಗಳನ್ನು ಕೂಡಾ ತಯಾರಿಸುತ್ತದೆ.

ಐಬಾಲ್‌ ಸ್ಲೆ„ಡ್‌ ಎಲನ್‌ 3×32 ಕ್ವಾಡ್‌ಕೋರ್‌ ಪ್ರೊಸೆಸರ್‌ ಹೊಂದಿದೆ. ಇದರಲ್ಲಿ 3 ಜಿಬಿ ರ್ಯಾಮ್‌, 32 ಜಿಬಿ ಇಂಟರ್‌ನಲ್‌ ಸ್ಟೋರೇಜ್‌, ಮೈಕ್ರೋ ಎಸ್‌ಡಿ ಕಾರ್ಡ್‌ ಹಾಕುವುದರ ಮೂಲಕ 64 ಜಿಬಿಯವರೆಗೆ ಸ್ಟೋರೇಜ್‌ನ್ನು ವಿಸ್ತರಿಸಬಹುದಾಗಿದೆ. ಐಬಾಲ್‌ ಸ್ಲೆ„ಡ್‌ ಎಲನ್‌ 3×32 ನಲ್ಲಿ 5 ಮೆಗಾಪಿಕ್ಸೆಲ್‌ ಪ್ರೈಮರಿ ಕೆಮರಾ ಹಾಗೂ 2 ಮೆಗಾಪಿಕ್ಸೆಲ್‌ನ ಫ್ರಂಟ್ ಕೆಮರಾ ಇದೆ. ಇದರ ಬ್ಯಾಟರಿ 7,000 ಎಂಎಎಚ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಒಂದು ಸಿಮ್‌ ಕಾರ್ಯವೆಸಗಲು ಮಾತ್ರ ಅವಕಾಶವಿದೆ. ಮೈಕ್ರೋ ಸಿಮ್‌ ಆಗಿರಬೇಕು. ಸಂಪರ್ಕ ಆಯ್ಕೆಗಳಲ್ಲಿ ವೈಫೈ, ಜಿಪಿಎಸ್‌, ಬ್ಲೂಟೂತ್‌, ಯುಎಸ್‌ಬಿ ಒಟಿಜಿ, ಎಫ್ಎಂ, 3ಜಿ, 4ಜಿ ಜತೆಗೆ ಎಲ್‌ಟಿಇ ವ್ಯವಸ್ಥೆಗಳಿವೆ. ಪ್ರಾಕ್ಸಿಮಿಟಿ ಸೆನ್ಸರ್‌, ಅಸೆಲೆರೊಮೀಟರ್‌ ಮತ್ತು ಆ್ಯಂಬಿಯೆಂಟ್ ಲೈಟ್ ಸೆನ್ಸರ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ