ಮಹಿಳೆಯರ ಕ್ಯಾಚೀ ಬ್ಯಾಗ್ಸ್‌

Team Udayavani, Feb 8, 2019, 7:26 AM IST

ಪಾರ್ಟಿ ಇರಲಿ, ಇನ್ಯಾವುದೇ ಸಮಾರಂಭಗಳಿರಲಿ ಮಹಿಳೆಯರ ಸೀರೆ, ಮೇಕಪ್‌ ಸೇರಿದಂತೆ ಇನ್ನಿತರ ಫ್ಯಾಶನ್‌ಗೆ ಮತ್ತಷ್ಟು ಕಳೆಯನ್ನು ತಂದುಕೊಡುವ ವಸ್ತು ಬ್ಯಾಗ್‌. ಮಹಿಳೆಯರಿಗೂ ಬ್ಯಾಗ್‌ ಮೇಲೆ ವಿಪರೀತ ವ್ಯಾಮೋಹ. ಶಾಪಿಂಗ್‌ ತೆರಳಿದಾಗ ಬ್ಯಾಗ್‌ನ ಅಂಗಡಿಗಳ ಒಳ ಹೊಕ್ಕು ಬರಬೇಕೆನ್ನುವ, ಹೊಸ ಲುಕ್‌ನ, ಟ್ರೆಂಡೀ ಬ್ಯಾಗ್‌ಗಳನ್ನು ಕೊಳ್ಳುವ ಬಯಕೆ ಎಲ್ಲರದ್ದೂ. ಹೀಗೆ ಹೊಸ ವಿನ್ಯಾಸಗಳನ್ನು ಹುಡುಕುತ್ತಿರುವ ನಾರೀಮಣಿಯರಿಗೆಂದೇ ಇಲ್ಲಿದೆ ಮಾಹಿತಿ.

ಕ್ಲಾಸೀ ಸ್ನಾಪ್ಸ್‌ ಕ್ಲ್ಯಾಸ್ಪ್ ಬ್ಯಾಗ್‌
ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿಯರು ಹಣ ಇಟ್ಟುಕೊಳ್ಳುವುದರ ಸಲುವಾಗಿ ಬಟ್ಟೆ ಚೀಲಗಳನ್ನು ಸೊಂಟಕ್ಕೆ ಸಿಲುಕಿಸುತ್ತಿದ್ದುದು ನೆನಪಿದೆಯೇ. ಅಂತಹುದೇ ಬ್ಯಾಗ್‌ ಇದು. ಆದರೆ ಈ ಬ್ಯಾಗ್‌ ಬಟ್ಟೆಯದ್ದಲ್ಲ. ಬದಲಾಗಿ ಲೆದರ್‌ ಬ್ಯಾಗ್‌. ಉದ್ದವಾದ ಕ್ರಾಸ್‌ ಶೋಲ್ಡರ್‌ಗಳನ್ನು ಹೊಂದಿರುವ ಈ ಬ್ಯಾಗ್‌ಗಳು ಬಣ್ಣ ಬಣ್ಣಗಳಲ್ಲಿ, ವಿವಿಧ ಶೈಲಿಯಲ್ಲಿ ಲಭ್ಯ.

ಟಿನ್‌ ಫಾಯಿಲ್‌ ಸಿಲ್ವರ್‌
ಚಿತ್ತಾಕರ್ಷಕ ಮತ್ತು ರೆಟ್ರೋ ಫ್ಯೂಚರಿಸ್ಟ್‌ ಬ್ಯಾಗ್‌ಗಳ ಆಯ್ಕೆಯಲ್ಲಿ ತೊಡಗಿರುವವರಿಗೆ ಇಲ್ಲಿದೆ ಸಂತೋಷದ ವಿಚಾರ. ಪಾರ್ಟಿ, ಮದುವೆ ಇನ್ನಿತರ ಯಾವುದೇ ಸಮಾರಂಭಗಳಿಗೆ ನೀವು ಯಾವುದೇ ಬಟ್ಟೆಯನ್ನು ಬೇಕಾದರೂ ತೊಟ್ಟುಕೊಳ್ಳಿ, ಅವೆಲ್ಲಕ್ಕೂ ಹೊಂದುವಂತೆ ಈ ಬ್ಯಾಗ್‌ಗಳನ್ನು ತಯಾರಿಸಲಾಗಿದೆ. ಉದ್ದವಾದ ಚೈನ್‌ ಹ್ಯಾಂಡಲ್‌ ಮತ್ತು ಕಾಮನ್‌ ಹ್ಯಾಂಡಲ್‌ಗ‌ಳಿರುವ ಈ ಬ್ಯಾಗ್‌ ನೋಡುಗರೆದುರು ಮೆರುಗು ತಂದುಕೊಡುತ್ತದೆ.

ಕಂಪಾರ್ಟ್‌ಮೆಂಟ್ ಲೈಜಿಂಗ್‌ ಬ್ಯಾಗ್ಸ್‌
ಒಂದೆರಡು ಜಿಪ್‌ಗ್ಳನ್ನು ಹೊಂದಿರುವ ಬ್ಯಾಗ್‌ಗಳನ್ನು ಉಪಯೋಗಿಸಿ ಬೇಸತ್ತಿರುವವರಿಗೆ ಕಂಪಾರ್ಟ್‌ಮೆಂಟ್ ಲೈಜಿಂಗ್‌ ಬ್ಯಾಗ್‌ ಇದೆ. ಇದರಲ್ಲಿ ಅನೇಕ ಕಂಪಾರ್ಟ್‌ಮೆಂಟ್‌ಗಳಿವೆ. ವಿವಿಧ ಸ್ಟೈಲ್‌ಗ‌ಳಲ್ಲಿ ಈ ಬ್ಯಾಗ್‌ ನೋಡುಗರ ಮನಸೂರೆಗೊಳ್ಳುತ್ತದೆ.

ಟಿನೀ ಕ್ಲಿಯರ್‌/ ಲಾರ್ಜ್‌ ಪ್ಲ್ರಾಸ್ಟಿಕ್‌ ಬ್ಯಾಗ್‌
ಹೆಸರೇ ಸೂಚಿಸುವಂತೆ ಈ ಬ್ಯಾಗ್‌ಗಳು ಪಾರದರ್ಶಕವಾಗಿದ್ದು, ವಿವಿಧ ಶೇಪ್‌ಗ್ಳಲ್ಲಿ ಲಭ್ಯವಿದೆ. ಲಾಂಗ್‌ ಮತ್ತು ಶಾರ್ಟ್‌ ಹ್ಯಾಂಡಲ್‌ಗ‌ಳಲ್ಲೆರಡರಲ್ಲಿಯೂ ಈ ಬ್ಯಾಗ್‌ಗಳು ಲಭ್ಯವಿದ್ದು ಚಿಕ್ಕ ಗಾತ್ರಗಳಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಫ್ರಿಂಟೆಡ್‌ ಟೋಟ್
ಬಟ್ಟೆ ಯಿಂದ ತಯಾರಿಸಲಾದ ಈ ಬ್ಯಾಗ್‌ಗಳ ಮೇಲೆ ಕಸೂತಿ ಕೆಲಸಗಳನ್ನು ಮಾಡಿ ಆಕರ್ಷಕ ಲುಕ್‌ ತಂದುಕೊಡುವ ಪ್ರಯತ್ನವಿದು. ಕೆಲವು ಬ್ಯಾಗ್‌ಗಳಿಗೆ ಚೈನ್‌ ಹ್ಯಾಂಡಲ್‌ ಅಳವಡಿಸಲಾಗಿದ್ದರೆ, ಇನ್ನು ಕೆಲವಕ್ಕೆ ಬಟ್ಟೆಗಳೇ ಕೈಗಳಾಗಿವೆ. ಜೀನ್ಸ್‌ ಜತೆಗೂ ಈ ಬ್ಯಾಗ್‌ ಮ್ಯಾಚ್.

ಇವಿಷ್ಟೆ ಅಲ್ಲ ಮೈಕ್ರೋ ಬ್ಯಾಗ್‌, ಯುನಿಕ್‌ ಶೇಪ್‌ ಬ್ಯಾಗ್‌, ನೀರಿನಲ್ಲಿ ವಾಸಿಸುವ ಪ್ರಾಣಿಗಳ ಶೇಪ್‌ನಲ್ಲಿ ತಯಾರಿಸಲಾಗಿರುವ ಸೀ ಸೆಲ್ಸ್‌ ಶಿ ಶೆಲ್ಸ್‌ ಬ್ಯಾಗ್‌ಗಳು, ವಿಂಸಿಕಲ್‌ ಅನ್‌ಕವರ್‍ಡ್ ಬ್ಯಾಗ್‌ಗಳು, ಬೆಲ್ಟ್ ಬ್ಯಾಗ್ಸ್‌ ಸೇರಿದಂತೆ ತರಹೇವಾರಿ ಬ್ಯಾಗ್‌ಗಳಿವೆ. ಕೊಂಚ ದುಬಾರಿಯಾದರೂ ವರ್ಷವಿಡಿ ನಿಮ್ಮ ಲುಕ್‌ ಜತೆಗೆ ಲಕ್‌ ಬದಲಾಯಿಸುವ ಸಾಮರ್ಥ್ಯವಿರುವ ಬ್ಯಾಗ್‌ಗಳನ್ನು ಕೂಡಲೇ ಖರೀದಿಸಿಯಲ್ಲಾ. ತಡವೇಕೆ.

ಬಾಕ್ಸ್ ಹ್ಯಾಂಡ್ ಬ್ಯಾಗ್ 
ಈ ಬ್ಯಾಗ್‌ಗಳನ್ನು ಪ್ರತ್ಯೇಕವಾಗಿ ಯುವ ಜನರಿಗೆಂದೇ ತಯಾರಿಸಿದಂತಿದೆ. ಹೆಸರೇ ಸೂಚಿಸುವಂತೆ ಈ ಬ್ಯಾಗ್‌ ಪೆಟ್ಟಿಗೆಯಾಕಾರದಲ್ಲಿದೆ. ಶಾಲೆಗಳಿಗೆ ಹೋಗುವ ಮಕ್ಕಳು ಟಿಫಿನ್‌ ಬಾಕ್ಸ್‌ ಅನ್ನು ತೆಗೆದುಕೊಂಡು ಹೋಗುವ ಬ್ಯಾಗ್‌ನ ಮಾದರಿಯಲ್ಲಿಯೇ ಈ ಬ್ಯಾಗ್‌ ಗಳು ಮಾರುಕಟ್ಟೆ ಪ್ರವೇಶಿಸಿವೆ. ಕ್ಲಾಸಿಕ್‌ ಲೆದರ್‌ ಬ್ಯಾಗ್‌ಗಳಂತೆಯೂ ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಲವಾರು ರೀತಿಯ ಪ್ರಿಂಟೆಡ್‌ ಡಿಸೈನ್‌ಗಳ ಮೂಲಕ ಇವುಗಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ಟ್ರಂಕ್‌
ಬ್ಯಾಗ್‌ಗಳೂ ಬ್ಯಾಗ್‌ ಶಾಪ್‌ ಗಳಿಗೆ ಲಗ್ಗೆ ಇಟ್ಟಿದ್ದು ವಿವಿಧ ಆಕಾರಗಳಲ್ಲಿ ಲಭ್ಯವಿದೆ. 

ಭುವನ ಬಾಬು, ಪುತ್ತೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ