ಪಾರ್ಕಿಂಗ್‌ಗೆ ವಿಭಿನ್ನ ತಂತ್ರಜ್ಞಾನ

Team Udayavani, Jan 6, 2019, 7:58 AM IST

ವಾಹನ ಇದ್ದವರ ಬಹು ಮುಖ್ಯ ಸಮಸ್ಯೆ ಪಾರ್ಕಿಂಗ್‌ ಮಾಡುವುದು. ನಗರ ಪ್ರದೇಶದಂತಹ ಸ್ಥಳಗಳಿಗೆ ತೆರಳಿದಾಗ ಈ ಸಮಸ್ಯೆ ಅತಿಯಾಗಿ ಕಾಡುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭೂಗತ ಪಾರ್ಕಿಂಗ್‌ ಎಂಬ ವ್ಯವಸ್ಥೆಯನ್ನು ಅನುಷ್ಠಾನಿಸುವುದು ಅತೀ ಅಗತ್ಯ.

ಏನಿದು ಭೂಗತ ಪಾರ್ಕಿಂಗ್‌
ಈ ಕಲ್ಪನೆ ಪ್ರಾರಂಭವಾಗಿದ್ದು ಜಪಾನಿಂದ ಇಲ್ಲಿ ಇಂತಹ 50ಕ್ಕೂ ಹೆಚ್ಚು ಪಾರ್ಕಿಂಗ್‌ ಸ್ಥಳಗಳಿವೆ. 2013 ರಲ್ಲಿ ಸ್ವಯಂಚಾಲಿತ ಯಾಂತ್ರಿಕ ಭೂಗತ ಪಾರ್ಕಿಂಗ್‌ ಲಾಟ್‌ ಆಗಿ ಪ್ರಾರಂಭಿಸಲಾಯಿತು. ಇದು ಮುಖ್ಯವಾಗಿ ಸೈಕಲ್‌ ಗಳ ಪಾರ್ಕಿಂಗ್‌ ಮಾಡಲು ರಚನೆಯಾಯಿತು. ಪ್ರಸ್‌-ಇನ್‌ ತಂತ್ರಜ್ಞಾನಕ್ಕೆ ಚಕ್ರವನ್ನು ಅತ್ಯಂತ ಸಣ್ಣ ಸ್ಥಳಗಳಲ್ಲಿ ಅಳವಡಿಸಬಹುದಾಗಿದೆ. ಪ್ರವೇಶ / ನಿರ್ಗಮನ ಕೇಂದ್ರಗಳಿಂದ ಹೊರತುಪಡಿಸಿ, ಚಕ್ರ ರಚನೆಯ ಉಳಿದ ಭಾಗವು ಭೂಗತವಾಗಿರುತ್ತದೆ. ಅದು ಸಂಪೂರ್ಣವಾಗಿ ಕಂಪ್ಯೂಟರ್‌ ನಿಯಂತ್ರಿತ ಸ್ವಯಂಚಾಲಿತವಾಗಿರುತ್ತದೆ. ಇದರಿಂದ ಕಳ್ಳತನ ಆಗುವುದನ್ನು ಕೂಡ ತಪ್ಪಿಸಬಹುದು. ಇದು ನಮ್ಮ ವೇಗದ ಗತಿಯ ನಗರಗಳಿಗೆ ಸೂಕ್ತವಾಗಿದೆ.

ಬೈಕ್‌ ಗಳಿಗೆ ಸೂಕ್ತ
ಮುಂಭಾಗದ ಚಕ್ರವನ್ನು ಸ್ಲಾಟ್‌ಗೆ ಸೇರಿದರೆ ಬೈಕುಗಳು ಸ್ವಯಂಚಾಲಿತವಾಗಿ ಭೂಗತ ಪಾರ್ಕಿಂಗ್‌ಗೆ ಹೋಗುವಂತೆ ಮಾಡಬಹುದು. ಇದರಿಂದ ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್‌
ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.

 ವಿಶ್ವಾಸ್‌ ಅಡ್ಯಾರ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ