ವಕ್ರರೇಖೆಗಳಲ್ಲಿ ಮುಖ ಪ್ರದರ್ಶನ 

Team Udayavani, Feb 8, 2019, 12:30 AM IST

ದೈನಂದಿನ ಆಗು ಹೋಗುಗಳ ನಡುವೆ ಎಂದಿನ ಅದೇ ಗಂಭೀರ ಮುಖಗಳನ್ನು ಕಾಣುತ್ತಾ ಇದ್ದ ಮಂಗಳೂರಿನ ಜನತೆಗೆ ಇತ್ತೀಚೆಗೆ ಕರಾವಳಿಯ ಪ್ರಮುಖರ ವ್ಯಂಗ್ಯ ಮುಖಗಳನ್ನು ನೋಡಿ ಆನಂದಿಸುವ ಸದವಕಾಶ ಒದಗಿ ಬಂದಿತ್ತು. ಕರಾವಳಿ ಉತ್ಸವದ ಆಯೋಜಕರು ಜಿಲ್ಲೆಯ ಕದ್ರಿ ಪಾರ್ಕಿನಲ್ಲಿ ಕರಾವಳಿ ಕ್ಯಾರಿಕೇಚರ್ ಎಂಬ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಈ ಸಲ ಕರಾವಳಿಯ ಸಾಧಕರನ್ನು ವಕ್ರರೇಖೆಗಳಲ್ಲಿ ತೋರಿಸುವ ಆಲೋಚನೆ ಮಾಡಿ, ರಾಜ್ಯದೆಲ್ಲೆಡೆಯ 17 ವ್ಯಂಗ್ಯಚಿತ್ರಕಾರ‌ರಿಂದ ಬರೆಸಿದ 60 ಕ್ಯಾರಿಕೇಚರ್ ಪ್ರದರ್ಶನ ಮೂರು ದಿನಗಳ ಕಾಲ ನಡೆಯಿತು. ಈ ಚಿತ್ರಗಳು ನಗಿಸಿದ್ದು ಮಾತ್ರವಲ್ಲ, ಆಯಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದವರಿಗೊಂದು ಗೌರವ ಎಂದು ಪರಿಗಣಿಸಲಾಯಿತು. 

ಕಡಲತಡಿ ಭಾರ್ಗವ ಶಿವರಾಮ ಕಾರಂತ, ಕಣ್ಣಲ್ಲಿ ಕರ್ನಾಟಕ ಹೊಂದಿರುವ ಕಯ್ನಾರ ಕಿಂಞಣ್ಣ ರೈ, ಕೋಟಿ ಚೆನ್ನಯ ಚಿತ್ರದ ಪಾತ್ರದಲ್ಲಿ ಮಿಂಚಿದ ಮಿನುಗುತಾರೆ ಕಲ್ಪನಾ, ಅಂದಿನ ತುಳು ಚಿತ್ರ ರೀಲ್‌ಗ‌ಳೊಂದಿಗೆ ಕೆ. ಎನ್‌. ಟೈಲರ್‌, ರಾವ್‌ಬೈಲ್‌, ಡಾ| ವೀರೆಂದ್ರ ಹೆಗಡೆ, ಸಂತೋಷ್‌ ಹೆಗ್ಡೆ, ಡಾ ಮೋಹನ್‌ ಆಳ್ವ, ಸಾಹಿತಿ ವೈದೇಹಿ, ಡುಂಡಿರಾಜ್‌, ಶಿಲ್ಪಾ ಶೆಟ್ಟಿ, ಸ್ಯಾಕೊÕàಫೋನ್‌ ವಾದಕ ಕದ್ರಿ ಗೋಪಾಲನಾಥ್‌, ಛಾಯಾ ಗ್ರಾಹಕ ಯಜ್ಞ, ಸದಾ ನಗು ಮೊಗದ ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ರಮಾನಾಥ ರೈ, ಹಾಸ್ಯ ನಟ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಬಲೆ ತೆಲಿಪಾಲೆ ಖ್ಯಾತಿಯ ದೀಪಕ್‌ ರೈ, ನಟ ರಾಜೇಶ್‌ ಶೆಟ್ಟಿ, ರಿಷಭ್‌ ಶೆಟ್ಟಿ ಮುಂತಾದವರ ಕ್ಯಾರಿಕೇಚರ್, ಕಲೆಯ ಆಳವನ್ನು ತೋರಿಸಿ ಗಮನ ಸೆಳೆಯಿತು. ಸ್ಥಳೀಯ ಹೆಸರುವಾಸಿ ವ್ಯಕ್ತಿಗಳ‌ ಕ್ಯಾರಿಕೇಚರ್ ಕೂಡ ಇದ್ದು, ವೀಕ್ಷಕರು ಅವರನ್ನು ಸುಲಭವಾಗಿ ಗುರುತಿಸಿದರು. ಈ ಎಲ್ಲಾ ಕ್ಯಾರಿಕೇಚರ್‌ಗಳಲ್ಲಿ ವ್ಯಂಗ್ಯಚಿತ್ರಕಾರರು ವ್ಯಕ್ತಿಗಳ ಉತ್ಪ್ರೇಕ್ಷಿತ ಮುಖಗಳನ್ನು ದೊಡ್ಡದಾಗಿಸಿ ಸಣ್ಣ ದೇಹ ತೋರಿಸಿದ್ದು ಮಾತ್ರವಲ್ಲ ಅವರವರ ಸ್ಥಿರ ಹಾವಭಾವಗಳು, ವೃತ್ತಿ-ಪ್ರವೃತ್ತಿಗಳು ಹಾಗೂ ಧರಿಸುವ ಉಡುಪುಗಳನ್ನೂ ಚೆನ್ನಾಗಿ ಚಿತ್ರಿಸಿದ್ದಾರೆ. 

ಹರಿಣಿ, ಜೇಮ್ಸ್‌ ವಾಜ್‌, ನಾಗನಾಥ್‌, ಚಂದ್ರ ಗಂಗೊಳ್ಳಿ, ನಂಜುಂಡಸ್ವಾಮಿ, ರಘುಪತಿ ಶೃಂಗೇರಿ, ಜಾನ್‌ ಚಂದ್ರನ್‌, ಜೀವನ್‌, ಯತಿ ಸಿದ್ಧಕಟ್ಟೆ ಮುಂತಾದ ಖ್ಯಾತ ಕ್ಯಾರಿಕೇಚರ್‌ ಪರಿಣತರು ತಮ್ಮ ಕೈಚಳಕ ತೋರಿದ್ದಾರೆ. ಅರುಣ್‌ ಕುಮಾರ್‌, ರಮೇಶ್‌ ಚಂಡೆಪ್ಪನವರ್‌, ನವೀನ್‌, ಪ್ರಶಾಂತ್‌ ಭಾರತ್‌, ಗೋಪಿ ಹಿರೆಬೆಟ್ಟು, ಹೆಚ್‌. ಎಸ್‌. ವಿಶ್ವನಾಥ್‌, ಶಂಕರ್‌ ಮೊದಲಾದವರು, ಈ ಕ್ಷೇತ್ರದಲ್ಲಿ ಹೊಸಬರು ಆದರೂ ಉತ್ತಮ ಪ್ರಯತ್ನ ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಿದ್ದು ವ್ಯಂಗ್ಯಚಿತ್ರ ಪ್ರದರ್ಶನದ ವೀಕ್ಷಣೆಯ ಜತೆಗೆ ಕಲಿಕೆಯ ಅವಕಾಶ ಕೊಟ್ಟಂತಾಯಿತು. 

ಜೀವನ್‌ ಶೆಟ್ಟಿ 


ಈ ವಿಭಾಗದಿಂದ ಇನ್ನಷ್ಟು

  • ಶ್ರದ್ಧೆಯಿಂದ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗ ಬಲ್ಲರೆಂಬುದನ್ನು ದೃಢಪಡಿಸಿತು. ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ...

  • ಸುನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳು ಕ್ರಮ ಪ್ರಕಾರ ತಮ್ಮ ಸರದಿ ಬಂದಾಗ ತಮ್ಮ ಗುಂಪಿನೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ....

  • ಮಂತ್ರ ನಾಟ್ಯ ಕಲಾ ಗುರುಕುಲವು, ನೃತ್ಯಗುರು ವಿದ್ವಾನ್‌ ಶ್ರಾವಣ್‌ ಉಳ್ಳಾಲರ ಸಾರಥ್ಯದಲ್ಲಿ ಸಂಭ್ರಮ ಹೆಸರಿನಲ್ಲಿ "ಸಾನಿಧ್ಯ' ಭಿನ್ನ ಸಾಮರ್ಥಯದ ಮಕ್ಕಳ ವಸತಿಯುತ...

  • ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗದ 60ನೇ ಸರಣಿಯಾಗಿ ಇತ್ತೀಚೆಗೆ ಬೆಂಗಳೂರಿನ ಸೋಮಶೇಖರ ಚೂಡನಾಥ್‌ ಮತ್ತು ಅವರ ಪತ್ನಿ ಸೌಮ್ಯ...

  • ಆಂಧ್ರದ ಬಂಜಾರ ನೃತ್ಯ , ಶಾಸ್ತ್ರೀಯ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ನವದುರ್ಗೆಯರ ವೈಭವ , ಗುಜರಾತಿನ ಗರ್ಭಾ ಮತ್ತು ದಾಂಡಿಯ ನೃತ್ಯ ಲವಲವಿಕೆ, ಆಕರ್ಷಕ ವಸ್ತ್ರ...

ಹೊಸ ಸೇರ್ಪಡೆ