“ಬೆವರ’ ಕಾಟ ಬಲ್ಲವರಾರು?

Team Udayavani, Mar 6, 2019, 12:30 AM IST

ಬೇಸಿಗೆಯಲ್ಲಿ ಮೈ ಬೆವರುವುದು ಸಾಮಾನ್ಯ. ಆದರೆ, ಕೆಲವರಿಗೆ ಬೆವರು ಒಂದು ಸಮಸ್ಯೆಯಾಗಿ ಕಾಡುತ್ತದೆ. ಬೆವರುಗುಳ್ಳೆ, ಮೈ ತುರಿಕೆಯಿಂದ ಬಳಲುವವರು ಕೆಲವರಾದರೆ, ಬೆವರು ವಾಸನೆಯ ಕಾರಣಕ್ಕೇ ಮುಜುಗರಕ್ಕೆ ಒಳಗಾಗುವವರು ಕೆಲವರು. ಬೆವರು ವಾಸನೆ ತಡೆಯಲು ಕೃತಕ ಸುಗಂಧದ್ರವ್ಯಗಳನ್ನು ಬಳಸಬಹುದು. ಅಯ್ಯೋ, ಪರ್ಫ್ಯೂಮ್‌ ದುಬಾರಿ. ಅದನ್ನು ಖರೀದಿಸಲು ಸಾಧ್ಯವಿಲ್ಲ ಅನ್ನುವವರು ಇಲ್ಲಿರುವ ವಿಧಾನಗಳನ್ನು ಅನುಸರಿಸಿ, ಬೆವರು ವಾಸನೆಯ ಸಂಕಷ್ಟದಿಂದ ಪಾರಾಗಬಹುದು. 

1. ಬೇಸಿಗೆಯಲ್ಲಿ ಎರಡು ಬಾರಿ ಸ್ನಾನ ಮಾಡಿದರೆ ಒಳಿತು.
2. ಬೆವರಿನ ಸಮಸ್ಯೆ ಇರುವವರು ಹೆಚ್ಚು ನೀರು ಕುಡಿಯಬೇಕು.
3. ಸ್ನಾನದ ನಂತರ ಸೌತೆಕಾಯಿಯ ತುಣುಕಿನಿಂದ ಮೈ ಉಜ್ಜಿಕೊಂಡರೆ, ವಾಸನೆ ಕಡಿಮೆಯಾಗುತ್ತದೆ. ಕೆಟ್ಟ ವಾಸನೆ ಬೀರುವ ಬ್ಯಾಕ್ಟೀರಿಯಾಗಳ ನಾಶಕ್ಕೆ ಸೌತೆಕಾಯಿ ಸಹಕಾರಿ.
4. ಸ್ನಾನದ ನಂತರ, ಅಡುಗೆ ಸೋಡಾವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಕಂಕುಳು ಮತ್ತು ಇತರ ಭಾಗಗಳಿಗೆ ಸವರಿಕೊಂಡರೆ ಬೆವರಿನ ಸಮಸ್ಯೆ ಕಾಡುವುದಿಲ್ಲ.
5. ಅರ್ಧ ಹೋಳು ಲಿಂಬೆಯನ್ನು ಕಂಕುಳುಗೆ ಹಚ್ಚಿ ಸ್ನಾನ ಮಾಡಿ.
6. ಸ್ನಾನದ ನೀರಿರುವ ಬಕೆಟ್‌ಗೆ ಲಿಂಬೆ ಹಣ್ಣು ಹಿಂಡಿದರೂ ಆದೀತು.
7. ಮಸಾಲೆಯುಕ್ತ ಮತ್ತು ಹೆಚ್ಚು ಕೆಫಿನ್‌ ಅಂಶವಿರುವ ಆಹಾರ ಸೇವನೆಯಿಂದ ಬೆವರಿನ ದುರ್ಗಂಧ ಹೆಚ್ಚುತ್ತದೆ. ಬೇಸಿಗೆಯಲ್ಲಿ ಇಂಥ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
8. ಪ್ರತಿದಿನವೂ ಶುಭ್ರವಾದ ಬಟ್ಟೆಗಳನ್ನೇ ಧರಿಸಿ.
9. ಬೇವಿನ ಎಲೆಯ ರಸ ಬೆರೆಸಿದ ನೀರಿನಿಂದ ಸ್ನಾನ ಮಾಡಿ.
10. ಬಿಗಿಯಾದ ಉಡುಪು ಧರಿಸದೆ, ದೇಹಕ್ಕೆ ಹಿತವೆನಿಸುವ ಹತ್ತಿಯ ಬಟ್ಟೆ ಧರಿಸಿ.

https://beta.udayavani.com/supplements/women/babys-bath

ಈ ವಿಭಾಗದಿಂದ ಇನ್ನಷ್ಟು

  • ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ...

  • ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಕಾಲಿಡುವುದೇ ಬೇಡಪ್ಪಾ ಅನ್ನಿಸುತ್ತದೆ. ಹಾಗಂತ ಒಳಗೇ ಕೂರಲಾದೀತೆ? ಬಿಸಿಲಲ್ಲಿ ತಿರುಗಾಡುವುದು ಅನಿವಾರ್ಯವಾದಾಗ ಮೈ ಕಾಂತಿಯ...

  • ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಉಡುಪು ಸೀರೆ. ಅದನ್ನು ತಯಾರಿಸುವ ಹೆಣ್ಣಿನ ಬದುಕೂ ಅಷ್ಟೇ ಸುಂದರ. ದಿನವಿಡೀ ಶ್ರಮಪಟ್ಟು, ಅಂದದ ಸೀರೆಯನ್ನು...

  • ಹಬ್ಬಹರಿದಿನಗಳಂದು ಸರ ಪಟಾಕಿ ಹಚ್ಚಿ ಡಮ್ಮೆಂದು ಸದ್ದು ಮಾಡಿ ಸಂಭ್ರಮಿಸುವುದು ಸಾಮಾನ್ಯ. ಸದ್ದು ಮಾಡದ "ಸರ' ಪಟಾಕಿ ಹಚ್ಚಿ ಸಂಭ್ರಮಿಸುವ ದಿನವನ್ನು ಎಲ್ಲಾದರೂ...

  • ಚಳಿಗಾಲ ಮುಗಿದು ಬೇಸಿಗೆ ಕಣ್ಬಿಟ್ಟಿದೆ. ಬಿಸಿಲು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲನ್ನು ಬಳಸಿಕೊಂಡೇ, ಮುಂಬರುವ ಮಳೆಗಾಲದ ತಯಾರಿ ಕೂಡ ಶುರುವಾಗಿದೆ....

ಹೊಸ ಸೇರ್ಪಡೆ