ಬಿಂಬುಳಿ ಸವಿ

Team Udayavani, Feb 8, 2019, 12:30 AM IST

ಮರದಲ್ಲಿ ಗೊಂಚಲು ಗೊಂಚಲುಗಳಾಗಿ ಬಿಡುವ ಬಿಂಬುಳಿಯ ಹೆಸರು ಕೇಳಿದೊಡನೆ ಅದರ ಹುಳಿಯನ್ನು ನೆನೆದು ನಾಲಿಗೆಯ ಅಡಿಯಲ್ಲಿ ಚೊರ್‌ ಎಂದು ನೀರೂರುತ್ತದೆ. ಬಾಲ್ಯದಲ್ಲಿ ಉಪ್ಪು ನಂಚಿಕೊಂಡು ಸವಿದ ಬಿಂಬುಳಿಯನ್ನು ಉಪಯೋಗಿಸಿ ಹಲವು ಸವಿರುಚಿಗಳನ್ನು ತಯಾರಿಸಬಹುದು.

ಬಿಂಬುಳಿ ಉಪ್ಪಿನಕಾಯಿ 
ಬೇಕಾಗುವ ಸಾಮಗ್ರಿ: ಬಿಂಬುಳಿ- ಇಪ್ಪತ್ತು, ಸಾಸಿವೆ- ಕಾಲು ಕಪ್‌, ಅರಸಿನ- ಎರಡು ಚಮಚ, ಇಂಗು ಸುವಾಸನೆಗಾಗಿ, ಮೆಂತೆ- ಒಂದು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಕುದಿಯುತ್ತಿರುವ ಉಪ್ಪು$ ನೀರಿಗೆ ಹೆಚ್ಚಿದ ಬೀಂಪುಳಿಯನ್ನು ಹಾಕಿ ಕೂಡಲೆ ತೆಗೆದು ಜಾಲರಿಯಲ್ಲಿ ಆರಲು ಬಿಡಿ. ಉಪ್ಪು ನೀರನ್ನು ಚೆನ್ನಾಗಿ ಕುದಿಸಿ ಆರಲು ಬಿಡಿ. ಸಾಸಿವೆ ಮತ್ತು ಮೆಂತೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ. ಮೆಣಸಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ಇದಕ್ಕೆ ಇಂಗು ಮತ್ತು ಅರಸಿನ ಹಾಕಿ ಬಿಸಿ ಮಾಡಿಕೊಳ್ಳಿ. ಆರಿದ ನಂತರ ಇವುಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ನಂತರ ಸ್ವಲ್ಪ ಉಪ್ಪು ನೀರು ಸೇರಿಸಿ ಪುನಃ ರುಬ್ಬಿ ಬೇಯಿಸಿಟ್ಟ ಬಿಂಬುಳಿಗೆ ಸೇರಿಸಿ ಬೇಕಷ್ಟು ಉಪ್ಪು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈಗ ತಯಾರಾದ ಉಪ್ಪಿನಕಾಯಿಗೆ ಬೆಳ್ಳುಳ್ಳಿ ಒಗ್ಗರಣೆಯನ್ನು ಬೇಕಿದ್ದರೆ ನೀಡಬಹುದು. 

ಬಿಂಬುಳಿ ವಿದ್‌ ಸ್ವೀಟ್‌ಕಾರ್ನ್ ಕೋಸಂಬ್ರಿ
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಬಿಂಬುಳಿ- ಎರಡು, ಕ್ಯಾರೆಟ್‌ ತುರಿ- ಆರು ಚಮಚ, ಮೂಲಂಗಿ ತುರಿ- ನಾಲ್ಕು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಕೊತ್ತಂಬರಿಸೊಪ್ಪು$ಸ್ವಲ್ಪ$, ಹಸಿಮೆಣಸು- ಒಂದು, ತೆಂಗಿನ ತುರಿ- ಮೂರು ಚಮಚ, ಬ್ಲೇಕ್‌ಸಾಲ್ಟ್- ಅರ್ಧ ಚಮಚ, ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ  ಕೆಂಪು ಮೆಣಸು, ಉದ್ದಿನಬೇಳೆ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ತುಪ್ಪದಲ್ಲಿ ನೀಡಿ. ನಂತರ ಕೆಂಪು ಮೆಣಸನ್ನು ಹುಡಿಮಾಡಿ ಚೆನ್ನಾಗಿ ಮಿಶ್ರಮಾಡಿ.

ಮೆಣಸುಕಾಯಿ
ಬೇಕಾಗುವ ಸಾಮಗ್ರಿ:
ಬಿಳಿ ಎಳ್ಳು – ಎರಡು ಚಮಚ, ಕಪ್ಪು ಎಳ್ಳು- ಎರಡು ಚಮಚ, ಉದ್ದಿನಬೇಳೆ- ಎರಡು ಚಮಚ, ಕೆಂಪು ಮೆಣಸು- ಐದು, ತೆಂಗಿನ ತುರಿ- ಒಂದು ಕಪ್‌, ಬಿಂಬುಳಿ- ಎಂಟು, ಮೆಣಸಿನಪುಡಿ- ಒಂದು ಚಮಚ, ಬೆಲ್ಲ ಮತ್ತು ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಹೆಚ್ಚಿದ ಬಿಂಬುಳಿಗೆ ಉಪ್ಪು, ಮೆಣಸಿನಪುಡಿ, ಬೆಲ್ಲ ಹಾಗೂ ಬೇಕಷ್ಟು ನೀರು ಸೇರಿಸಿ ಬೇಯಲು ಇಡಿ. ಎಳ್ಳನ್ನು ಮೊದಲು ಹುರಿದು ತೆಗೆದುಕೊಳ್ಳಿ. ಅದೇ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಮೆಣಸು ಮತ್ತು ಉದ್ದಿನ ಬೇಳೆಯನ್ನು ಹುರಿಯಿರಿ. ನಂತರ ಹುರಿದ ಮಸಾಲೆಗಳನ್ನೆಲ್ಲ ತೆಂಗಿನ ತುರಿಯೊಡನೆ ಬೇಕಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿಟ್ಟ ಬಿಂಬುಳಿಗೆ ಇದನ್ನು ಸೇರಿಸಿ ಕರಿಬೇವು ಮತ್ತು ಸೀಳಿದ ಹಸಿಮೆಣಸಿನ ಜೊತೆ ಕುದಿಸಿ ಇಳಿಸಿ. ದಪ್ಪವಾದ ಗಸಿಯಂತಿರುವ ಇದಕ್ಕೆ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.

ಗೊಜ್ಜು 
ಬೇಕಾಗುವ ಸಾಮಗ್ರಿ:
ಬಿಂಬುಳಿ- ಆರು, ಕೆಂಪು ಮೆಣಸಿನಪುಡಿ- ಒಂದು ಚಮಚ, ಅರಸಿನ- ಕಾಲು ಚಮಚ, ರಸಂ ಪೌಡರ್‌- ಎರಡು ಚಮಚ, ಉಪ್ಪು ಮತ್ತು ಬೆಲ್ಲ ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ಬಿಂಬುಳಿಗೆ ಬೆಲ್ಲ, ಉಪ್ಪು ಮೆಣಸಿನಪುಡಿ ಮತ್ತು ಅರಸಿನ ಸೇರಿಸಿ ಬೇಯಲು ಇಡಿ. ಇದು ಬೇಯುತ್ತಾ ಬರುವಾಗ ರಸಂ ಪೌಡರ್‌ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಸ್ವಲ್ಪ ನೀರು ಆರಿದ ನಂತರ ಒಲೆಯಿಂದ ಇಳಿಸಿ. ಬೆಳ್ಳುಳ್ಳಿ ಮತ್ತು ಕರಿಬೇವು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ.

ಗೀತಸದಾ


ಈ ವಿಭಾಗದಿಂದ ಇನ್ನಷ್ಟು

 • 2 weeks ago

  ಥೈರಾಯ್ಡ ತರಲೆ

  2 weeks ago

  ಹ‌ದಿನಾರು ವರ್ಷದ ಶುಭಾ, ಹತ್ತನೇ ತರಗತಿಯವರೆಗೂ ಓದಿನಲ್ಲಿ ಕ್ಲಾಸ್‌ಗೆà ಟಾಪರ್‌. ದ್ವಿತೀಯ ಪಿಯುಸಿಗೆ ಬಂದ ಮೇಲೆ, ಓದಿನಲ್ಲಿ ಹಿಂದೆ ಬೀಳಲು ಆರಂಭಿಸಿದಳು. ಬರೀ...

 • ನಾನು ಐದಾರು ವರ್ಷಗಳ ಹಿಂದೆ ನಮ್ಮೂರಾದ ಕಲ್ಲುಗುಂಡಿಯಲ್ಲಿ ಕಂಪ್ಯೂಟರ್‌ ಕಲಿಯುತ್ತಿದ್ದಾಗ ನನ್ನ ಶಿಕ್ಷಕಿ ಒಂದು ಮಧ್ಯಾಹ್ನ ಅವರ‌ ಮನೆಗೆ ಕರೆದುಕೊಂಡು ಹೋದರು....

 • ಸ್ವರ ಭಾಸ್ಕರ ಬಾಲಿವುಡ್‌ನ‌ ದಿಟ್ಟ ಧ್ವನಿ ಎಂದೇ ಪರಿಚಿತೆ. ಯಾವುದೇ ವಿಷಯದ ಬಗ್ಗೆ ನಿರ್ಬಿಢೆಯಿಂದ ಮಾತನಾಡಬಲ್ಲ ಸ್ವರ ಈ ಕಾರಣಕ್ಕಾಗಿಯೇ ಬಾಲಿವುಡ್‌ನ‌ಲ್ಲಿ...

 • ಘಟನೆ-1 ಅನುಪಮಾ, ನಿನ್ನೆ ನಿಮ್ಮ ಮಗುವಿಗೆ ಟೊಪ್ಪಿ ಹಾಕಿದ್ರಲ್ಲಾ , ಆ ಟೊಪ್ಪಿ ಎಲ್ಲಿ ತಗೊಂಡ್ರಿ? ತುಂಬಾ ಚೆನ್ನಾಗಿತ್ತು. ನಾನಂತೂ ಇಂಥ ಟೋಪಿಯನ್ನು  ಎಲ್ಲೂ...

 • ಈಗೀಗ ಮಕ್ಕಳಿಗೆ ಶಾಲಾರಂಭವಾಗಿ ಹೆಚ್ಚು-ಕಡಿಮೆ ಒಂದು ತಿಂಗಳಷ್ಟೇ ಸರಾಗವಾಗಿ ಉಸಿರಾಡೋಕೆ ಪುರುಸೊತ್ತು. ಮತ್ತೆ ಪರೀಕ್ಷಾ ಭೀತಿ ಶುರುವಾಗಿ ಬಿಡುತ್ತದೆ. ಪ್ರತೀ...

ಹೊಸ ಸೇರ್ಪಡೆ