ಗೆಳತಿಗೆ ಸಲಾಂ

Team Udayavani, Feb 8, 2019, 12:30 AM IST

ಸ್ವತಂತ್ರ ಭಾರತದ ಎಪ್ಪತ್ತನೇ ಗಣರಾಜ್ಯೋತ್ಸವ ನಮ್ಮ ಪಾಲಿಗೊಂದು ಮರೆಯಲಾಗದ ದಿನ. ಯಾಕೆಂದರೆ, ನನ್ನ ಗೆಳತಿ ಪ್ರೀತಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಭಾಗವಹಿಸಿದ ದಿನವದು. ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎನ್‌ಸಿಸಿ ಕೆಡೆಟ್‌ ಅವಳು. 

ಗಣರಾಜ್ಯೋತ್ಸವದಂತಹ ಪರೇಡ್‌ನ‌ಲ್ಲಿ ಭಾಗವಹಿಸುವುದು ಎಂದರೆ ಹೆಮ್ಮೆಯ ವಿಷಯವಲ್ಲವೆ! ಇಂತಹ ಭಾಗ್ಯ ನನ್ನ ಗೆಳತಿಯ ಪಾಲಿಗೆ ಒದಗಿಬಂದಿದೆ ಎಂದರೆ ಅದಕ್ಕಿಂತ ಸಂತೋಷದ ವಿಚಾರ ಬೇರುಂಟೆ? ಬಂಟ್ವಾಳ ತಾಲೂಕಿನ ಕನ್ಯಾನ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಆಕೆ ಕನ್ಯಾನದಲ್ಲಿರುವ ಶ್ರೀಸರಸ್ವತಿ ವಿದ್ಯಾಲಯಕ್ಕೆ ಪ್ರಾಥಮಿಕ ಶಿಕ್ಷಣಕ್ಕಾಗಿ ಸೇರಿದವಳು. ಕನ್ಯಾನದಲ್ಲಿಯೇ ಹುಟ್ಟಿರುವ ನಾನೂ ಅವಳದೇ ತರಗತಿಗೆ ಸೇರಿಕೊಂಡೆ. ನಂತರ ನಾವು ಹೈಸ್ಕೂಲ್‌ ವಿದ್ಯಾಭ್ಯಾಸವನ್ನು ಬೇರೆ ಬೇರೆ ಶಾಲೆಯಲ್ಲಿ ಕಲಿತರೂ ಮತ್ತೆ ಪಿಯುಸಿ ಹಾಗೂ ಪದವಿಯನ್ನು ಪೂರೈಸಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿಯೇ. ಅವಳು ಕಾಲೇಜಿನ ಎನ್‌ಸಿಸಿಗೆ ಸೇರಿಕೊಂಡಳು. ನಾನೂ ಅವಳೊಂದಿಗೆ ಎನ್‌ಸಿಸಿಗೆ ಸೇರಿಕೊಳ್ಳಬೇಕೆಂದು ಬಯಸಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಆದರೆ, ನನ್ನ ಗೆಳತಿ ಮಾತ್ರ ಎಷ್ಟೇ ಕಷ್ಟ ಬಂದರೂ ಕಠಿಣ ಪರಿಶ್ರಮದಿಂದ ಮುನ್ನುಗ್ಗಬೇಕೆನ್ನುವ ಛಲ ಇದ್ದದ್ದರಿಂದ ಹಲವು ಹಂತಗಳನ್ನು ದಾಟಿ ದೆಹಲಿಯಲ್ಲಿ ನಡೆದ ಪರೇಡ್‌ಗೂ ಆಯ್ಕೆಯಾಗಿಬಿಟ್ಟಳು.

ಪ್ರೀತಿಯ ಗೆಳತಿಗಿದೋೆ ನಿನ್ನ ಸಹಪಾಠಿಗಳ, ಅಧ್ಯಾಪಕರ ಹಾಗೂ ಹೆತ್ತವರ ಪರವಾಗಿ ದೊಡ್ಡದೊಂದು ಸಲಾಂ.

ಸ್ವಾತಿ ಬಿ. ಶೆಟ್ಟಿ ಕನ್ಯಾನ
ದ್ವಿತೀಯ ಬಿ. ಎಸ್ಸಿ. ವಿವೇಕಾನಂದ ಕಾಲೇಜು, ಪುತ್ತೂರು


ಈ ವಿಭಾಗದಿಂದ ಇನ್ನಷ್ಟು

 • ಅಂತೂ ಮಳೆರಾಯನ ಆಡಳಿತಾವಧಿ ಕೊನೆಗೊಂಡಿದೆ. ಚಳಿರಾಯ ಪಟ್ಟವೇರಿದ್ದಾನೆ. ಕಾಡುವ ಚಳಿಗೆ ಎಲ್ಲರ ಬದುಕು - ಭಾವಗಳೆಲ್ಲ ಬದಲಾಗುವ ಕಾಲವಿದು. ಜತೆಗೆ ಬೆಚ್ಚಗಿನ ಬಟ್ಟೆ...

 • ಮುಖದಲ್ಲಿ ಪ್ರೀತಿಯ ಭಾವನೆಯಿತ್ತು. ಆ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಕಾಮನೆಯಿತ್ತು. ಹೌದು, ಪ್ರೀತಿಸಿದವ ಪ್ರೀತಿಯನ್ನು ತೊರೆದಿದ್ದ. ಮನದಾಳದಿಂದ ಮನಕ್ಕೆ...

 • ದೇಶಾಭಿಮಾನ, ಸಾಹಸ, ನಾಯಕತ್ವ ಗುಣ, ರಾಷ್ಟ್ರೀಯತೆಯನ್ನು ಹುರಿದುಂಬಿಸುವ ಎನ್‌ಸಿಸಿಯಲ್ಲಿ, ತೊಡಗಿಕೊಳ್ಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಂಟೆದೆ ಬೇಕು....

 • 3 weeks ago

  ಜನುಮ ದಿನ

  3 weeks ago

  ಎಲ್ಲರ ಜೀವನದಲ್ಲೂ ಜನುಮ ದಿನ ಅಂದರೆ ಏನೋ ಖುಷಿ. ಅದರಲ್ಲೂ ನಮ್ಮಂತಹ ವಿದ್ಯಾರ್ಥಿಗಳಿಗೆ ಹೇಳಬೇಕೆ? ನಾವೆಲ್ಲ ಶಾಲೆಯಲ್ಲಿ ಇರುವಾಗ ಚಾಕಲೇಟ್‌ ಹಂಚುವ ಪದ್ಧತಿ ಇತ್ತು....

 • ಕಾಲೇಜು ವಿದ್ಯಾರ್ಥಿಗಳು ಜಾಲತಾಣಗಳ ಬಳಕೆಯಲ್ಲಿ ಎಂದೆಂದಿಗೂ ಅಗ್ರಗಣ್ಯರು! ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌  ಇಂದು ಸರ್ವೇಸಾಮಾನ್ಯವಾಗಿ ಬಳಕೆಯಲ್ಲಿರುವ...

ಹೊಸ ಸೇರ್ಪಡೆ