ಬಂದ ನೋಡೋ “ಪೈಲ್ವಾನ್’: ಮಾಸ್ ಟೀಸರ್ ವೀಕ್ಷಿಸಿ

ಈಗಾಗಲೇ ವಿಭಿನ್ನ ಲುಕ್​ಗಳ ಮೂಲಕ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿರುವ, ಸ್ಯಾಂಡಲ್‍ವುಡ್‍ನ ಆರಡಿ ಕಟೌಟ್, ಬಾದ್‍ಷಾ, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಪೈಲ್ವಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಟೀಸರನ್ನು ಚಿತ್ರತಂಡ ಉಡುಗೊರೆಯಾಗಿ ನೀಡಿದೆ. ಟೀಸರ್​ನಲ್ಲಿ ಕಿಚ್ಚ ಸುದೀಪ್​ ಪಕ್ಕಾ “ಪೈಲ್ವಾನ್’​ ಗೆಟಪ್​ನಲ್ಲಿ ದರ್ಶನ ಕೊಟ್ಟಿದ್ದು, ಪೊಗರ್​ದಸ್ತ್ ಲುಕ್​ನಲ್ಲಿ ಬಾದ್‍ಷಾ​ ಮಿಂಚಿದ್ದಾರೆ. ಜೊತೆಗೆ ಮೇಕಿಂಗ್​ ಸ್ಟೈಲ್​ ಶಿಳ್ಳೆ, ಚಪ್ಪಾಳೆ ಗಿಟ್ಟಿಸುವಂತಿದ್ದು, ಚಿತ್ರದ ಮೇಲೆ ಸಿನಿಪ್ರಿಯರ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. “ಪೈಲ್ವಾನ್’ ಚಿತ್ರ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಪಂಜಾಬಿ, ಭೋಜ್ಪುರಿ ಹಾಗೂ ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಚಿತ್ರದ ಡಬ್ಬಿಂಗ್ ಹಕ್ಕು ಖರೀದಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆಯಂತೆ. ಇನ್ನು “ಪೈಲ್ವಾನ್’ ಚಿತ್ರವು ಬಾಕ್ಸಿಂಗ್‌ ಮತ್ತು ಕುಸ್ತಿ ಕುರಿತಾದ ಚಿತ್ರವಾಗಿದ್ದು, ಈ ಹಿಂದೆ ಚಿತ್ರದ ಮೊದಲ ಲುಕ್‌ ಸಖತ್ ವೈರಲ್ ಆಗಿತ್ತು. ಚಿತ್ರದಲ್ಲಿ ಬಾಲಿವುಡ್​ ನಟ ಸುನೀಲ್ ಶೆಟ್ಟಿ ಅವರು ನಟಿಸುತ್ತಿದ್ದು, ಸುದೀಪ್ ಎದುರಿಗೆ ನಾಯಕಿಯಾಗಿ ಮುಂಬೈ ಮೂಲದ ಆಕಾಂಕ್ಷಾ ಸಿಂಗ್ ತೆರೆ ಹಂಚಿಕೊಳ್ಳುತ್ತಿದ್ದು, ಕಬೀರ್ ಸಿಂಗ್ ದುಹಾನ್ ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ ಆರ್‌.ಆರ್‌.ಆರ್‌. ಮೋಷನ್‌ ಪಿಕ್ಚರ್ ಬ್ಯಾನರ್‌ನಡಿ ಸ್ವಪ್ನ ಕೃಷ್ಣ ಮತ್ತು ಕೃಷ್ಣ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶನದ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೃಷ್ಣ ಅವರೇ ರಚಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದರೆ, ಕರುಣಾಕರನ್‌ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಅನೇಕರ ತಾರಾಬಳಗವಿದೆ. ಚಿತ್ರದ ಮಾಸ್ ಟೀಸರ್ ವೀಕ್ಷಿಸಿ.


ಹೊಸ ಸೇರ್ಪಡೆ