ಸೀತಾರಾಮನ “ಕಲ್ಯಾಣ’ ಸಂಭ್ರಮ: ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ

ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್‍ವೊಂದನ್ನು ಬಿಡುಗಡೆ ಮಾಡಿದೆ. “ಮಾಂಗಲ್ಯಂ ತಂತು ನಾನೇನಾ’ ಎಂಬ ಮದುವೆ ಸಂಭ್ರಮದ ಹಾಡು ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೂಪ್​ ರೂಬೆನ್ಸ್​ ಮ್ಯೂಸಿಕ್​ ಕಂಪೋಸ್​ ಮಾಡಿರೋ ಈ ಹಾಡನ್ನ ವಿಜಯ್ ಪ್ರಕಾಶ್​ ಹಾಡಿದ್ದು, ಈ ಸಖತ್​ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಲಿರಿಕ್ಸ್ ಬರೆದಿದ್ದಾರೆ. ಮುಖ್ಯವಾಗಿ ನಿರ್ದೇಶಕ ಹರ್ಷ ಅವರೇ ಡ್ಯಾನ್ಸ್​​ ಕೊರಿಯಾಗ್ರಫಿ​ ಮಾಡಿದ್ದಾರೆ. ಅಲ್ಲದೇ ಹಾಡಿನ ಲಿರಿಕಲ್‌ ವಿಡಿಯೋದಲ್ಲಿ ಮದುವೆ ಸಂಭ್ರಮ ಎದ್ದು ಕಾಣುತ್ತಿದ್ದು, ಚೆನ್ನಾಂಬಿಕ ಫಿಲಂಸ್‌ ಬ್ಯಾನರ್‌ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವಾಮಿ ಛಾಯಾಗ್ರಹಣ, ಸುನೀಲ್‌ ಗೌಡ ಸಹ ನಿರ್ಮಾಣ, ಪ್ರಶಾಂತ್‌ ರಾಜಪ್ಪ, ಹಾಗೂ ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಅಂದಹಾಗೆ ಜನವರಿ 25 ರಂದು “ಸೀತಾರಾಮ ಕಲ್ಯಾಣ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ.


ಹೊಸ ಸೇರ್ಪಡೆ