ಆ್ಯಂಟೆನಾದಲ್ಲಿ ನೇತಾಡಿ ಹಕ್ಕಿ ಕಬಳಿಸಿದ ಹೆಬ್ಬಾವು!

Team Udayavani, Feb 23, 2019, 6:55 AM IST

ಹೆಬ್ಬಾವುಗಳು ಕಮೋಡ್‌ಗಳಲ್ಲಿ ಕಾರಿನ ಎಂಜಿನ್‌ ಒಳಗೆ ಸೇರಿದ್ದ ಸುದ್ದಿಗಳನ್ನು ನೀವು ಓದಿರುತ್ತೀರಿ. ಆ ಘಟನೆಗಳು ಆಶ್ಚರ್ಯ ತರಿಸಿದರೂ ತೀರಾ ಅಸ್ವಾಭಾವಿಕ ಎಂದು ನಿಮಗೆ ಅನಿಸಿರಲಾರವು. ಆಸ್ಟ್ರೇಲಿಯಾದ ಕಿಂಗ್ಸ್ ಕ್ಲಿಫ್ ನ ಮನೆಯೊಂದರ ಮೇಲೆ ನಿಲ್ಲಿಸಿದ್ದ ಟೀವಿ ಆ್ಯಂಟೆನಾದಲ್ಲಿ ದೈತ್ಯ ಹೆಬ್ಬಾವೊಂದು ಜೋತಾಡುತ್ತಿದ್ದ ದೃಶ್ಯವನ್ನು ಮನೆಯ ಮಾಲೀಕರಾದ ಕ್ಯಾಥಿ ಗಾಲ್‌ ಸೆರೆಹಿಡಿದಿದ್ದಾರೆ.

ಆ್ಯಂಟೆನಾದಿಂದ ಜೋತಾಡುತ್ತಲೇ ಪಕ್ಷಿಯೊಂದನ್ನು ಹಾವು ಕಬಳಿಸುತ್ತಿರುವ ದೃಶ್ಯ ಎಂಥವರಿಗೂ ಭಯ ಹುಟ್ಟಿಸುವಂತಿದೆ. ಕ್ಯಾಥಿ ಹೇಳುವಂತೆ ಸುಮಾರು ಒಂದೂವರೆ ಗಂಟೆಗಳ ಕಾಲ ಆ ಹೆಬ್ಬಾವು ಅದೇ ಸ್ಥಿತಿಯಲ್ಲಿ ನೇತಾಡುತ್ತಿತ್ತಂತೆ. ಈ ವಿಡಿಯೋವನ್ನು ಕ್ಯಾಥಿ ಫೇಸ್‌ ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈಗ ಈ ಭಯಂಕರ ದೃಶ್ಯ ಭಾರಿ ವೈರಲ್‌ ಆಗಿದೆ.

https://beta.udayavani.com/vinoda-special/carpet-python-devours-currawong-on-roof-in-viral-video

ಈ ವಿಭಾಗದಿಂದ ಇನ್ನಷ್ಟು

  • ರೆಸ್ಟೋರೆಂಟ್‌ಗಳಲ್ಲಿ ತಿನ್ನುವ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸುವ ಆಹಾರದಲ್ಲಿ ಮಣ್ಣು, ಕಲ್ಲು, ಜಿರಳೆ ಸಿಕ್ಕ ಸುದ್ದಿಯನ್ನು ನೀವುಓದುತ್ತಲೇ ಇರುತ್ತೀರಿ...

  • ಸೌದಿಯ ವಿಮಾನವೊಂದು ಟೇಕ್‌ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಿಂಗ್‌ ಅಬ್ದುಲ್‌ ಅಜೀಜ್‌ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣಕ್ಕೆ ಮರಳಿದೆ. ಮಹಿಳಾ ಪ್ರಯಾಣಿಕರೊಬ್ಬರು...

  • ಮದುವೆ ಮೂಹೂರ್ತದ ವೇಳೆ ವರ ಕಂಠ ಪೂರ್ತಿ ಕುಡಿದು ಬಂದರೆ ವಧು ಮತ್ತು ಆಕೆಯ ಸಂಬಂಧಿಗಳಿಗೆ ಹೇಗಾಗಬೇಡ? ಬಿಹಾರದ ದುಮ್ರಿ ಚಾಪಿಯ ಗ್ರಾಮದಲ್ಲಿ ವರ ಕುಡಿತು ತೂರಾಡುತ್ತಾ...

  • ಮೇಕೆ ಎಲ್ಲಾದರೂ "ಮೇಯರ್‌' ಹುದ್ದೆಗೇರಿದ್ದನ್ನು ಕೇಳಿದ್ದೀರಾ? ಮಕ್ಕಳ ಕಥೆ ಪುಸ್ತಕಗಳಲ್ಲಿ ಇಂಥ ಕಾಲ್ಪನಿಕ ಕಥೆಗಳನ್ನು ಓದಿರಬಹುದು. ಆದರೆ, ಅಮೆರಿಕದ ಹಳ್ಳಿಯೊಂದರಲ್ಲಿ...

  • ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಬೀದಿ ನಾಯಿ ಮರಿಯೊಂದು ಈಗ ಪಶ್ಚಿಮ ಬಂಗಾಳದ ಪ್ರತಿಷ್ಠಿತ ಶ್ವಾನ ಪಡೆಗೆ ಸೇರ್ಪಡೆಯಾಗಿದೆ. ಇದು ಪಶ್ಚಿಮ ಬಂಗಾಳ ಶ್ವಾನ ಪಡೆಗೆ...

ಹೊಸ ಸೇರ್ಪಡೆ