ಹಿಮದಲ್ಲಿ ಪ್ರೇಮ ನಿವೇದನೆ, ಜಾಲತಾಣಗಳಲ್ಲಿ ಹಿಟ್‌

Team Udayavani, Feb 24, 2019, 9:32 AM IST

ವಿನೂತನ ಶೈಲಿಯಲ್ಲಿ ಪ್ರೇಮಿಗಳು ಪ್ರೇಮ ನಿವೇದನೆ ಮಾಡುವುದು ಸುದ್ದಿಯಾಗುತ್ತಲೇ ಇರುತ್ತವೆ. ಹಲವಾರು ಬಾರಿ ಇಂಥ ನಿವೇದನೆಗಳು ಎಷ್ಟೋ ಜನರಿಗೆ ಮಾದರಿಯಾಗುತ್ತವೆ. ಅಂಥ ಸಾಲಿಗೆ ಷಿಕಾಗೋದ ಬಾಬ್‌ ಲೆಂಪ ಕೂಡ ಸೇರುತ್ತಾರೆ. ಅವರು ಹಿಮ ಆವರಿಸಿದ ನೆಲದಲ್ಲಿ “ಮ್ಯಾರಿ ಮೀ’ ಎಂದು ಬರೆದಿದ್ದಾರೆ.

ಇವರ ಪ್ರೇಯಸಿ ಆ ಆವರಣ ಬಳಿಯ ಕಟ್ಟಡವೊಂದರಲ್ಲಿ 37ನೇ ಅಂತಸ್ತಿನಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಅಷ್ಟು ಮೇಲಿನಿಂದ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ “ನನ್ನನ್ನು ಮದುವೆಯಾಗುತ್ತೀಯಾ’ ಎಂದು ಬರೆದು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಈ ಫೋಟೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಖುಷಿಯ ವಿಷಯವೆಂದರೆ, ಆ ಯುವತಿಯು ಲೆಂಪ ಅವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರಂತೆ.

https://beta.udayavani.com/vinoda-special/chicago-man-writes-proposal-in-snow-for-girlfriend

ಈ ವಿಭಾಗದಿಂದ ಇನ್ನಷ್ಟು

  • ರೆಸ್ಟೋರೆಂಟ್‌ಗಳಲ್ಲಿ ತಿನ್ನುವ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸುವ ಆಹಾರದಲ್ಲಿ ಮಣ್ಣು, ಕಲ್ಲು, ಜಿರಳೆ ಸಿಕ್ಕ ಸುದ್ದಿಯನ್ನು ನೀವುಓದುತ್ತಲೇ ಇರುತ್ತೀರಿ...

  • ಸೌದಿಯ ವಿಮಾನವೊಂದು ಟೇಕ್‌ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಿಂಗ್‌ ಅಬ್ದುಲ್‌ ಅಜೀಜ್‌ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣಕ್ಕೆ ಮರಳಿದೆ. ಮಹಿಳಾ ಪ್ರಯಾಣಿಕರೊಬ್ಬರು...

  • ಮದುವೆ ಮೂಹೂರ್ತದ ವೇಳೆ ವರ ಕಂಠ ಪೂರ್ತಿ ಕುಡಿದು ಬಂದರೆ ವಧು ಮತ್ತು ಆಕೆಯ ಸಂಬಂಧಿಗಳಿಗೆ ಹೇಗಾಗಬೇಡ? ಬಿಹಾರದ ದುಮ್ರಿ ಚಾಪಿಯ ಗ್ರಾಮದಲ್ಲಿ ವರ ಕುಡಿತು ತೂರಾಡುತ್ತಾ...

  • ಮೇಕೆ ಎಲ್ಲಾದರೂ "ಮೇಯರ್‌' ಹುದ್ದೆಗೇರಿದ್ದನ್ನು ಕೇಳಿದ್ದೀರಾ? ಮಕ್ಕಳ ಕಥೆ ಪುಸ್ತಕಗಳಲ್ಲಿ ಇಂಥ ಕಾಲ್ಪನಿಕ ಕಥೆಗಳನ್ನು ಓದಿರಬಹುದು. ಆದರೆ, ಅಮೆರಿಕದ ಹಳ್ಳಿಯೊಂದರಲ್ಲಿ...

  • ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಬೀದಿ ನಾಯಿ ಮರಿಯೊಂದು ಈಗ ಪಶ್ಚಿಮ ಬಂಗಾಳದ ಪ್ರತಿಷ್ಠಿತ ಶ್ವಾನ ಪಡೆಗೆ ಸೇರ್ಪಡೆಯಾಗಿದೆ. ಇದು ಪಶ್ಚಿಮ ಬಂಗಾಳ ಶ್ವಾನ ಪಡೆಗೆ...

ಹೊಸ ಸೇರ್ಪಡೆ