ಈ ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

 • ತ್ಯಾಗರಾಜ

  ಸುರಕ್ಷಿತವಾಗಿದ್ದ ತಮ್ಮ ಸಿಂ ಹಾಸನವನ್ನು ವಂಶದ ಕುಡಿಗಾಗಿ ಮಾಡಿದರು ತ್ಯಾಗ ಪರಿಣಾಮವಾಗಿ ಈಗ ಸಿಗುತ್ತಿಲ್ಲ ಗೌಡರಿಗೆ ನಿಲ್ಲಲು ಸರಿಯಾದ ಜಾಗ!  ಎಚ್‌. ಡುಂಡಿರಾಜ್‌

 • ಸೀಟು ಹಂಚಿಕೆ

  ನಗುನಗುತ್ತಲೇ ಸಿದ್ದು ಪರಂಗೆ ತಿಳಿಸಿದರು- ಜೆಡಿಎಸ್‌ ಪಾಲಾಯಿತು ನಿಮ್ಮ ತುಮಕೂರು ತುಮ್‌ ಕಾ ಊರು. ಉಳಿಸಿಕೊಂಡೆ ಮೈಸೂರು ನನ್ನ  Myಸೂರು! ಎಚ್‌.ಡುಂಡಿರಾಜ್‌

 • ಹೊಸ ಚಿನ್ಹೆ

  ಮತದಾರರ ಮನ ಗೆಲ್ಲಲು ಪ್ರಯೋಗಿಸುತ್ತಾರೆ ಇವರು ಅಳು ಎಂಬ ವರುಣಾಸ್ತ್ರ ಕೊಡಬೇಕು ಇವರ ಪಕ್ಷಕ್ಕೆ ಚುನಾವಣಾ ಆಯೋಗ ಹೊಸ ಚಿನ್ಹೆ -ಕರವಸ್ತ್ರ!  ಎಚ್‌. ಡುಂಡಿರಾಜ್‌

 • ಸಪ್ತಪದಿ

  ಬೇಸಿಗೆ ಬಂತೆಂದರೆ ಸಾಕು ಶುಭ ಕಾರ್ಯಗಳು ಶುರು ಮದುವೆ, ಮುಂಜಿ ಇತ್ಯಾದಿ, ಈ ಬಾರಿ ಅವುಗಳ ಜತೆ ಏಳು ಹಂತಗಳಲ್ಲಿ ಮಹಾ ಚುನಾವಣೆ ಎಂಬ ಸಪ್ತಪದಿ!  ಎಚ್‌. ಡುಂಡಿರಾಜ್‌ 

 • ಸಾಲ ಮನ್ನಾ

  ನಲ್ಲೆ ಹೇಳಿದಳು “”ಓ ನಲ್ಲ ತೀರಿಸಲು ಆಗುವುದಿಲ್ಲ ನೀ ಕೊಟ್ಟ ಮುತ್ತುಗಳ ಸಾಲವನ್ನು” ನಲ್ಲ ಅಂದ “”ಪರವಾಗಿಲ್ಲ. ಸಾಲಮನ್ನಾ ಮಾಡಿ ಕೊಡುತ್ತೇನೆ ಹೊಸ ಲೋನು!  ಎಚ್‌. ಡುಂಡಿರಾಜ್‌

 • ಪರಿಹಾರ

  ರಾಜಭವನದಲ್ಲಿ ಬೆಕ್ಕುಗಳ ಹಾವಳಿ ವಿಧಾನ ಸೌಧದಲ್ಲಿ ಇಲಿ. ಬೆಕ್ಕುಗಳನ್ನು ಹಿಡಿದು ಬಿಟ್ಟರಾಯಿತು ವಿಧಾನಸೌಧದ ಬಳಿ!  ಎಚ್‌. ಡುಂಡಿರಾಜ್‌

 • ಮಿತ್ರ

  ಇಬ್ಬರೂ ಎದ್ದಿದ್ದೆವು ಒಟ್ಟಿಗೆ ವಾಕಿಂಗಿಗೆ ಹೊರೆಟೆವು ಜೊತೆಗೆ ಒಂದು ಗಂಟೆ ಆಗುವಷ್ಟರಲ್ಲಿ ನನಗೆ ಏದುಸಿರು, ಬೆವರು ಮಿತ್ರ ನಿಜಕ್ಕೂ ಶಕ್ತಿಶಾಲಿ ನಡೆಯುತ್ತಲೇ ಇದ್ದಾನೆ ಇನ್ನೂ ಆಕಾಶದಲ್ಲಿ !  ಎಚ್‌. ಡುಂಡಿರಾಜ್‌

 • ಸೆಮಿ-ನಾರಿಗೆ

  ವಿದೇಶದಲ್ಲಿ ನಾರಿಯರ ಬಗ್ಗೆ ನಡೆದ ಸೆಮಿನಾರಿಗೆ ನಾರಿಯರ ಜತೆ ಗಂಡನಿಗೂ ಉಚಿತ ವಸತಿ ಸಾರಿಗೆ ದೇವರ ಮುಡಿಯಲ್ಲಿ ಜಾಗ ಹೂವಿನ ಜತೆ ನಾರಿಗೆ!  ಎಚ್‌. ಡುಂಡಿರಾಜ್‌

 • ನಾರಿ ಶಕ್ತಿ

  ಹೆಂಡತಿ ಹೇಳುತ್ತಿದ್ದಳು ಅವಳ ಗೆಳತಿಯ ಬಳಿ- ನಾರಿ ಶಕ್ತಿಗೆ ಒಂದು ನಿದರ್ಶನ, ಓಡೋಡಿ ಬರುತ್ತಾರೆ ನನ್ನ ಗಂಡ  ನಾ-ರೀ ಅಂದಾಕ್ಷಣ!  ಎಚ್‌. ಡುಂಡಿರಾಜ್‌

 • ಸಲಹೆ

  ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಸಮಸ್ಯೆ ಆಗಬೇಕಾದರೆ ಇತ್ಯರ್ಥ, ಮುಂದಿನ ಸಭೆಗೆ ರೇವಣ್ಣನನ್ನು ಕೇಳಿ ಇಟ್ಟುಕೊಳ್ಳಿ ಮುಹೂರ್ತ ಎಚ್‌. ಡುಂಡಿರಾಜ್‌

 • ವಿನಿಮಯ ಕೊಡುಗೆ

  ಶುರುವಾಗಿದೆ ಭಾರಿ ಎಕ್ಸ್‌ ಚೇಂಜ್‌ ಆಫ‌ರ್‌ ಹಳೆಯದನ್ನು ಕೊಟ್ಟು ಹೊಸದನ್ನು ಪಡೆಯಿರಿ ಈ ವಿಶೇಷ ಕೊಡುಗೆ ಕೆಲವೇ ದಿನಗಳವರೆಗೆ ಕೇವಲ ಮರ ಗಿಡಗಳಿಗೆ !  ಎಚ್‌. ಡುಂಡಿರಾಜ್‌ 

 • ಕಾರಣ

  ಬಿಎಸ್‌ವೈ ಮತ್ತು ಸಿದ್ದು ಹಳೆಯ ಜಗಳ ಮರೆತು ಹಂಚಿಕೊಂಡರು ಒಂದೇ ವೇದಿಕೆ ಕಾರಣ ಬಹಳ ಸರಳ ಇಬ್ಬರೂ ಮಾಜಿ ಸಿಎಂ ಸಮಾನ ದುಃಖಿಗಳು ಅದಕ್ಕೆ! *ಎಚ್‌. ಡುಂಡಿರಾಜ್‌

 •  ತಣ್ಣಗೆ

  ಇಬ್ಬರು ಹೆಂಡಿರಿದ್ದರೂ ತಲೆ ಬಿಸಿ ಇಲ್ಲದೆ ಶಿವ ತಣ್ಣಗಿದ್ದಾನೆ ಅದು ಹೆಂಗೆ? ಕಾರಣ ಇಷ್ಟೆ ತಲೆಯ ಮೇಲಿರುವ ಎರಡನೆ ಮಡದಿ ಗಂಗೆ!

 • ಕಚೇರಿಯಲ್ಲಿ

  ಅಬ್ಬಾ ಅದೇನು ಮಾತು ಚರ್ಚೆ, ಹಾಸ್ಯ, ನಗೆ ಬಾಸ್‌ ಹೊರಗಿರುವಾಗ , ಆತ ಬರುತ್ತಿದ್ದ ಹಾಗೆ ಕಚೇರಿ ಆಗುತ್ತದೆ ಗಡಿ ಪ್ರದೇಶ ವಾಘಾ !  ಎಚ್‌. ಡುಂಡಿರಾಜ್‌

 • ಮನೆಗೆ

  “ಚುನಾವಣೆ ಮುಗಿವವರೆಗೆ ಮನೆಗೆ ಹೋಗಬೇಡಿ’ ಕಾರ್ಯಕರ್ತರಿಗೆ ಬಿಎಸ್‌ವೈ ಕರೆ . ಹಾಗೆ ಮಾಡಿದರೂ ಕೆಲವರು ಚುನಾವಣೆಯಲ್ಲಿ ಸೋತು ಮನೆಗೆ ಹೋಗುತ್ತಾರೆ !  *ಎಚ್‌. ಡುಂಡಿರಾಜ್‌  

 • ಲತೆ

  ಹುಡುಗಿ ಚೆನ್ನಾಗಿದ್ದಾಳೆ ತೆಳ್ಳಗೆ, ಬೆಳ್ಳಗೆ ಚಾರುಲತೆ , ಪುಷ್ಪಲತೆ ಎಲ್ಲ ಸರಿ ಆದರೂ ಹುಷಾರಾಗಿರಿ ಸ್ವಭಾವದಲ್ಲಿ ಚಂಚಲತೆ !  ಎಚ್‌. ಡುಂಡಿರಾಜ್‌

 • ವ್ಯತ್ಯಾಸ

  ಮೊದಲೇ ಎಚ್ಚರಿಕೆ ನೀಡಿ ಆಡಿದಂತೆಯೇ ಮಾಡಿದ ನಮ್ಮ ಯೋಧರು ಪರಾಕ್ರಮಿಗಳು. ಕಳ್ಳರಂತೆ ಒಳಗೆ ಬಂದು ಅಮಾಯಕರನ್ನು ಕೊಂದು ತಾವೂ ಸಾಯುವ ಉಗ್ರರು ಪರಾಕ್ರಿಮಿಗಳು! ಎಚ್‌.ಡುಂಡಿರಾಜ್‌

 • ಅದೇ ಮಧು

  ಲೋಕಸಭಾ ಚುನಾವಣೆಯಲ್ಲಿ ಪುನಃ ಶಿವಮೊಗ್ಗದಿಂದ ಸ್ಪರ್ಧಿಸುತ್ತಾರಂತೆ ಮಧು, ಹಾಗಾದರೆ ಹಳೆಯ ಬಾಟಲಿಯಲ್ಲಿ ಹಳೆಯ ವೈನ್‌ ಅನ್ನಬಹುದು!  ಎಚ್‌. ಡುಂಡಿರಾಜ್‌

 • ಮೂರು ಸಲ

  ಪರಂಗೆ ಮೂರು ಬಾರಿ ತಪ್ಪಿತಂತೆ ಸಿಎಂ ಪಟ್ಟ ಇದಕ್ಕೆ ಕಾರಣ ಯಾರೋ? ಪರವಾಗಿಲ್ಲ ಬಿಡಿ ಈ ವಿಚಾರದಲ್ಲಿ ಪರಂ ನಿಜವಾಗಿ ಹ್ಯಾಟ್ರಿಕ್‌ ಹೀರೋ!   *ಎಚ್‌. ಡುಂಡಿರಾಜ್‌  

 • ಕಾಣದ್ದು

  ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಬಣ್ಣಿಸುತ್ತಾನೆ ಅದರ ವಿವರ ಕವಿ ಕಾಣದ್ದನ್ನು ಸೆರೆ ಹಿಡಿಯುತ್ತದೆ ಒಳ್ಳೆಯ ಸಿಸಿ ಕೆಮರ ! *ಎಚ್.ದುಂಡಿರಾಜ್

 • ಬದಲಾವಣೆ

  ಅಪರೇಶನ್‌ ಕಮಲ ಮತ್ತೂಮ್ಮೆ ವಿಫ‌ಲ ಆಗುತ್ತಿದೆ ದೊಡ್ಡ ಜೋಕು ಇನ್ನಾದರೂ ಹಳೆಯ ಉಪಕರಣ ಬಿಸಾಕಿ ತನ್ನಿ ಹೊಸ ಕತ್ತರಿ ಚಾಕು!  ಎಚ್‌. ಡುಂಡಿರಾಜ್‌

 • ನೆರೆ ಸಂತ್ರಸ್ತ

  ನೆರೆ ಸಂತ್ರಸ್ತರ ಪಟ್ಟಿಯಲ್ಲಿ ನನ್ನ ಹೆಸರು ಬರೆದುಕೊಳ್ಳಿ ಎಲ್ಲರಿಗಿಂತಲೂ ಮೊದಲು , ಕಾರಣವೇನು ಗೊತ್ತೇ? ಮುವ್ವತ್ತನೆ ವಯಸ್ಸಿನಲ್ಲೇ  ಬಂದಿತ್ತು ನನಗೆ ನೆರೆಗೂದಲು ! ಎಚ್‌.ಡುಂಡಿರಾಜ್‌

 •  ಸಂಕ್ರಾಂತಿ

  ಒಳ್ಳೆಯ ಕೆಲಸಗಳನ್ನು ಮಾಡದಿರಲು ಇನ್ನು ಯಾವ ನೆಪಗಳೂ ಇಲ್ಲ ಶೂನ್ಯಮಾಸ ಮುಗಿದು ಸಂಕ್ರಾಂತಿ ಬಂದಿದೆ ಹಂಚೋಣ ಎಳ್ಳುಬೆಲ್ಲ! ಎಚ್‌.ಡುಂಡಿರಾಜ್‌

 • ಚಳಿ

  ಗಡಗಡ ನಡುಗುತ್ತ ಚಂದ್ರ ಹೇಳುತ್ತಿದ್ದ ತಾರೆಯ ಬಳಿ , ನಮ್ಮ ವೈರಿಗೂ ಬೇಡ ಚಳಿಗಾಲದಲ್ಲಿ ರಾತ್ರಿ ಪಾಳಿ !  ಎಚ್‌. ಡುಂಡಿರಾಜ್‌

 • ಐಟಿ ದಾಳಿ

  ಯಾವ ನಟನ ಬಳಿ ಎಷ್ಟು ಚಿನ್ನ ಬೆಳ್ಳಿ ಸಿಕ್ಕಿದ್ದು ಎಷ್ಟು ಕೋಟಿ? ಈ ವಿಷಯದಲ್ಲಿ ಈಗ ಅಭಿಮಾನಿಗಳ ನಡುವೆ ನಡೆದಿದೆ ಪೈಪೋಟಿ! ಎಚ್‌.ಡುಂಡಿರಾಜ್‌

ಹೊಸ ಸೇರ್ಪಡೆ